ಮಂಗಳವಾರ, ಮಾರ್ಚ್ 28, 2023
33 °C

ಬೈ2 ಕಾಫಿ ಪ್ರದರ್ಶನ ನಾಳೆ

indina karyakrama Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಭಿಷೇಕ್‌ ಅಯ್ಯಂಗಾರ್‌ ಅವರು ಬರೆದು ನಿರ್ದೇಶಿಸಿರುವ ‘ಬೈ2 ಕಾಫಿ‘ ನಾಟಕ ಇದೇ 10ರಂದು ಜೆ.ಪಿ. ನಗರದ ರಂಗಶಂಕರದಲ್ಲಿ ವೀಮೂವ್‌ ಥಿಯೇಟರ್‌ ತಂಡದಿಂದ ಪ್ರದರ್ಶನಗೊಳ್ಳಲಿದೆ. 

ಮಧ್ಯಮ ವರ್ಗದ ಕುಟುಂಬದ ತಾಯಿ–ಮಗನ ಮಧ್ಯದ ಸಂಘರ್ಷಗಳ ಬಗ್ಗೆ ‘ಬೈ2 ಕಾಫಿ‘ ವಿವರಿಸುತ್ತದೆ. ಧರ್ಮ ನಿಷ್ಠ ತಾಯಿಯು ತನ್ನ ಮಗನ ಭದ್ರತೆಯ ಬಗ್ಗೆ ನಿರಂತರವಾಗಿ ಚಿಂತಿಸುವ ಈ ನಾಟಕದಲ್ಲಿ ತಾಯಿಯೊಬ್ಬಳು ಹೊಂದಿರುವ ನಂಬಿಕೆಗಳು, ಪದ್ಧತಿಗಳು ಮತ್ತು ಸಂಪ್ರದಾಯ, ಸಿದ್ಧಾಂತಗಳಿಗೆ ಮಗ ನೀಡುವ ಪ್ರಾಯೋಗಿಕ ಉತ್ತರಗಳು ಚಿಕತಗೊಳಿಸುತ್ತದೆ. ಅಮೆರಿಕದಲ್ಲಿ ನೆಲೆಸಿರುವ ಮಗ ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ವಿವಾಹಕ್ಕಾಗಿ ಬಯಸುವ ತಾಯಿಯ ತೊಳಲಾಟ, ಧಾರ್ಮಿಕ ತತ್ವಗಳ ಸೆಳೆತ ಇಲ್ಲಿ ಚಿತ್ರತವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು