ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾನ್ಸ್‌ಸ್ಟ್ರಾಯ್‌ಗೆ ನೀಡಿದ್ದು ₹678 ಕೋಟಿ ಮಾತ್ರ: ಕೆನರಾ ಬ್ಯಾಂಕ್

Last Updated 19 ಡಿಸೆಂಬರ್ 2020, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಹೈದರಾಬಾದ್‌ ಮೂಲದ ಟ್ರಾನ್ಸ್‌ಸ್ಟ್ರಾಯ್‌ ಕಂಪನಿಗೆ ನೀಡಿದ್ದ ಸಾಲದ ಮೊತ್ತ ₹678.28 ಕೋಟಿ ಮಾತ್ರ ಎಂದು ಕೆನರಾ ಬ್ಯಾಂಕ್‌ ಸ್ಪಷ್ಟಪಡಿಸಿದೆ.

₹7,926 ಕೋಟಿ ಮೊತ್ತದ ವಂಚನೆ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಕೆನರಾ ಬ್ಯಾಂಕ್‌ ₹4,765 ಕೋಟಿಯಷ್ಟು ಸಾಲವನ್ನು ಕಂಪನಿಗೆ ನೀಡಿದೆ ಎಂದು ತಪ್ಪಾಗಿ ಹೇಳಲಾಗುತ್ತಿದೆ. ಆದರೆ, 2013ರಲ್ಲಿ ಕೆನರಾ ಬ್ಯಾಂಕ್‌ ನೇತೃತ್ವದಲ್ಲಿ 13 ಬ್ಯಾಂಕ್‌ಗಳು ಸೇರಿ ₹4,765.70 ಕೋಟಿ ಸಾಲವನ್ನು ಕಂಪನಿಗೆ ನೀಡಿದ್ದವು. ಆದರೆ, ಇದರಲ್ಲಿ ಕೆನರಾ ಬ್ಯಾಂಕ್‌ ಪಾಲು ₹678.28 ಕೋಟಿ ಮಾತ್ರ ಎಂದು ಬ್ಯಾಂಕ್‌ ಹೇಳಿದೆ.

ಬ್ಯಾಂಕ್‌ ವ್ಯವಸ್ಥೆಗೆ ಅನುಗುಣವಾಗಿಯೇ ಕಂಪನಿಗೆ ಸಾಲವನ್ನು ಮಂಜೂರು ಮಾಡಲಾಗಿತ್ತು. ಆದರೆ ಕಂಪನಿಯು ಈಗ ದಿವಾಳಿ ಸ್ಥಿತಿಗೆ ತಲುಪಿದೆ. ಟ್ರಾನ್ಸ್‌ಸ್ಟ್ರಾಯ್‌ ಕಂಪನಿಯನ್ನು 2018ರ ಡಿಸೆಂಬರ್‌ 26ರಂದೇ ಉದ್ದೇಶಪೂರ್ವಕ ಕರ್ತವ್ಯಲೋಪ ಎಸಗಿರುವ ಕಂಪನಿ ಎಂದು ಘೋಷಿಸಲಾಗಿದೆ ಎಂದು ಕೆನರಾ ಬ್ಯಾಂಕ್‌ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT