ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮನೆಯಲ್ಲಿ ಗಾಂಜಾ ಬೆಳೆಸಿದ್ದ ವ್ಯಕ್ತಿ ಬಂಧನ

Published 25 ಅಕ್ಟೋಬರ್ 2023, 15:28 IST
Last Updated 25 ಅಕ್ಟೋಬರ್ 2023, 15:28 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ಆರೋಪದಡಿ ರಾಮ್ ಆಶೀಸ್ (33) ಎಂಬುವವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೊತ್ತನೂರು ಬಳಿಯ ಭೈರತಿ ನಿವಾಸಿ ರಾಮ್ ಆಶೀಸ್, ಬಹುಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಖಾಲಿ ಬಕೆಟ್‌ನಲ್ಲಿ ಮಣ್ಣು ಹಾಕಿದ್ದ ಆರೋಪಿ, ಅದರಲ್ಲಿ ಆರು ತಿಂಗಳಿನಿಂದ ಗಾಂಜಾ ಗಿಡ ಬೆಳೆಸುತ್ತಿದ್ದರು. ಸದ್ಯ 6 ಅಡಿಯಷ್ಟು ಗಾಂಜಾ ಗಿಡ ಬೆಳೆದಿದೆ. ಗಾಂಜಾ ಎಲೆ, ಹೂವು ಹಾಗೂ ಮೊಗ್ಗುಗಳನ್ನು ಕಿತ್ತು ಒಣಗಿಸಿ ಮಾರಾಟ ಮಾಡಲು ಯೋಚಿಸಿದ್ದ. ಈ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಕೃತ್ಯದಲ್ಲಿ ತೊಡಗಿದ್ದ.’

‘ಆರೋಪಿ ಗಿಡ ಬಳಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT