‘ಮರಗಳನ್ನು ಉಳಿಸಿಕೊಳ್ಳಲು ಆ ಪ್ರದೇಶವನ್ನು ಪಾರಂಪರಿಕ ತಾಣವನ್ನಾಗಿಸಲಾಗಿತ್ತು. ಇದಕ್ಕಾಗಿ ಸಾಕಷ್ಟು ಮಂದಿ ಹೋರಾಟ ನಡೆಸಿದ್ದರು. ಮರಗಳ ರಕ್ಷಣೆಯಾಯಿತು ಎಂಬ ಸಂತಸ ಇನ್ನೂ ಮಾಸದ ಸಮಯದಲ್ಲೇ ಯಾವುದೇ ವಿವರಣೆ ಇಲ್ಲದೆ ಅಧಿಸೂಚನೆ ವಾಪಸ್ ಪಡೆದಿರುವುದು ಸರಿಯಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ಹೇಳಿದರು.