ಆನೇಕಲ್: ಜಮ್ಮುಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ಅಂತಿಮ ಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ರಾಷ್ಟ್ರಪ್ರೇಮ, ಕುಟುಂಬದವರ ನೀರವ ಮೌನದ ನಡುವೆ ಪ್ರಾಂಜಲ್ ಅವರ ಅಂತಿಮ ಸಂಸ್ಕಾರ ನೆರವೇರಿತು.

ಶನಿವಾರ ಬೆಳಗ್ಗೆ 8ರಿಂದಲೂ ಜಿಗಣಿ ಸಮೀಪದ ನಂದನವದಲ್ಲಿನ ಪ್ರಾಂಜಲ್ ಅವರ ನಿವಾಸದ ಮುಂಭಾಗದಲ್ಲಿ ಪ್ರಾಂಜಲ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ವಿದ್ಯಾರ್ಥಿಗಳು, ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು, ಕಾರ್ಮಿಕರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

ಭಾರತ್ ಮಾತಾಕಿ ಜೈ, ವಂದೇ ಮಾತರಂ, ಅಮರ್ ರಹೇ ಪ್ರಾಂಜಲ್ ಎಂಬ ಘೋಷಣೆಗಳು ಮೊಳಗಿದವು. ದೇಶಭಕ್ತಿ ಗೀತೆಗಳ ಗಾಯನದ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಪೊಲೀಸ್ ಮತ್ತು ಮಿಲಿಟರಿ ಪಡೆಗಳ ಸುವ್ಯವಸ್ಥಿತ ಮೇಲ್ವಿಚಾರಣೆಯಲ್ಲಿ ಪ್ರಾಂಜಲ್ ಅವರ ಪಾರ್ಥೀವ ಶರೀರದ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.

ಬೆಳಗ್ಗೆ 11ರ ಸುಮಾರಿಗೆ ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಗೌರವ ವಂದನೆ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪ್ರಾಂಜಲ್ ಅವರಿಗೆ ಗೌರವ ಸಲ್ಲಿಸಿದರು. ಗೌರವ ವಂದನೆಯ ನಂತರ ಪಾರ್ಥೀವ ಶರೀರವನ್ನು ಪ್ರಾಂಜಲ್ ಅವರ ಮನೆಗೆ ಕೊಂಡೊಯ್ಯಲಾಯಿತು.

ಅಲ್ಲಿ ಕುಟುಂಬದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಅನಂತರ ಪಾರ್ಥೀವ ಶರೀರವನ್ನು ಮಿಲಿಟರಿ ವಾಹನದಲ್ಲಿ ಇಡಲಾಯಿತು. ಇಲ್ಲಿಂದ ಪ್ರಾರಂಭವಾದ ಮೆರವಣಿಗೆ ಓಟಿಸಿ ಸರ್ಕಲ್, ಜಿಗಣಿ ಸರ್ಕಲ್, ಬನ್ನೇರುಘಟ್ಟ, ನೈಸ್ ರಸ್ತೆಯ ಮೂಲಕ ಕೋನಪ್ಪನ ಅಗ್ರಹಾರ, ಕೂಡ್ಲು ಮೂಲಕ ಸೋಮಸುಂದರಪಾಳ್ಯದಲ್ಲಿನ ವಿದ್ಯುತ್ ಚಿತಾಗಾರ ತಲುಪಿತು.

ಮಧ್ಯಾಹ್ನ 3.10ಕ್ಕೆ ಸರಿಯಾಗಿ ಪ್ರಾಂಜಲ್ ಅವರ ಅಂತ್ಯಕ್ರಿಯೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.