ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಯಲ್ಲಿ ವ್ಯತ್ಯಯ ಇಂದು

Last Updated 22 ಜನವರಿ 2020, 21:58 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನೀರು ಸರಬರಾಜು ಯೋಜನೆಯ 1,2 ಹಾಗೂ 3ನೇ ಹಂತದ ಟಿ.ಕೆ.ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯ ಜಲಾಗರಗಳಲ್ಲಿ ದುರಸ್ತಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಗುರುವಾರ (ಜ.23) ನಗರದ ವಿವಿಧೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಜಯನಗರ, ಜೆ.ಪಿ.ನಗರ, ಬಸವನಗುಡಿ, ಬನಶಂಕರಿ 2 ಮತ್ತು 3ನೇ ಹಂತ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿ.ವಿ.ಪುರ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭನಗರ, ಬೈರಸಂದ್ರ, ಜಾನ್ಸನ್ ಮಾರುಕಟ್ಟೆ, ಆಡುಗೋಡಿ, ದೊಮ್ಮಲೂರು, ಬಿಟಿಎಂ ಬಡಾವಣೆ,‌ ಬಾಪೂಜಿನಗರ, ಮೈಸೂರು ರಸ್ತೆ, ಶ್ರೀರಾಂಪುರ, ಓಕಳೀಪುರ, ಇಂದಿರಾನಗರ 1ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ, ಕೋರಮಂಗಲ, ವಿಜಯನಗರ, ಚೋಳೂರು ಪಾಳ್ಯ, ಜೀವನ್ ಬಿಮಾನಗರ, ವಿಲ್ಸನ್ ಗಾರ್ಡನ್ ರಸ್ತೆ, ಹೊಂಬೇಗೌಡನಗರ, ನೀಲಸಂದ್ರ, ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆಯಲ್ಲಿ ನೀರು ಪೂರೈಕೆಯಲ್ಲಿ ಏರುಪೇರಾಗಲಿದೆ.

ಗೋಕುಲ್ ಎಕ್ಸ್‌ಟೆನ್ಷನ್‌, ಜಯಮಹಲ್, ವಸಂತನಗರ, ಆರ್.ಎಸ್.ಪಾಳ್ಯ, ಜಾನಕಿರಾಮ ಬಡಾವಣೆ, ಲಿಂಗರಾಜಪುರ, ಮುತ್ಯಾಲನಗರ, ಆರ್.ಟಿ.ನಗರ, ಸಂಜಯನಗರ, ಸದಾಶಿವನಗರ, ಹೆಬ್ಬಾಳ, ಪ್ಯಾಲೇಸ್ ಗುಟ್ಟಳ್ಳಿ, ಭಾರತೀನಗರ, ಸುಧಾಮನಗರ, ಮಚಲಿ ಬೆಟ್ಟ, ಫ್ರೇಜರ್ ಟೌನ್, ಪಿಳ್ಳಣ್ಣ ಗಾರ್ಡನ್, ಬನ್ನಪ್ಪ ಉದ್ಯಾನ, ಶಿವಾಜಿನಗರ, ಚಿಕ್ಕಲಾಲ್‍ಬಾಗ್, ಗವಿಪುರ, ಬ್ಯಾಟರಾಯನಪುರ, ಮೆಜೆಸ್ಟಿಕ್, ಕಸ್ತೂರಬಾ ರಸ್ತೆ, ಮಡಿವಾಳ, ಯಲಚೇನಹಳ್ಳಿ, ಇಸ್ರೊ ಬಡಾವಣೆ, ಪೂರ್ಣಪ್ರಜ್ಞ ಬಡಾವಣೆ, ಮುನೇಶ್ವರನಗರ, ಸಂಪಂಗಿರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT