* ಅಸಮರ್ಪಕ ನೀರು ಪೂರೈಕೆ: ದೂರು * ತಪ್ಪದ ಟ್ಯಾಂಕರ್ ನೀರಿನ ಅವಲಂಬನೆ * ನಿಗದಿತ ದಿನ, ಸಮಯದಲ್ಲಿ ನೀರು ಪೂರೈಸಿ
ಬಂಜಾರ ಬಡಾವಣೆ ಸೇರಿದಂತೆ ಕೆಲವು ಕಡೆಗಳಲ್ಲಿ ಮುಖ್ಯ ಕೊಳವೆಗಳೊಂದಿಗಿನ ಸಂಪರ್ಕ ತಪ್ಪಿರುತ್ತದೆ(ಮಿಸ್ಸಿಂಗ್ ಲಿಂಕ್). ನೀರಿನ ಸೋರಿಕೆ ಸಮಸ್ಯೆಯೂ ಇದೆ. ಎಲ್ಲವನ್ನೂ ಹಂತ ಹಂತವಾಗಿ ಸರಿಪಡಿಸುತ್ತಿದ್ದೇವೆ. ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿರುವ ಕುರಿತು ಜಲಮಂಡಳಿಗೆ ಮಾಹಿತಿ ನೀಡಿದರೆ ತಕ್ಷಣ ಬಗೆಹರಿಸುತ್ತೇವೆ.