ಗುರುವಾರ , ಫೆಬ್ರವರಿ 20, 2020
27 °C
ಸಿಸಿಬಿ ಪೊಲೀಸರ ಕಾರ್ಯಾಚರಣೆ * ಬೆಳಗಾವಿಯ ನಾಲ್ವರ ಬಂಧನ

ನಕಲಿ ಔಷಧಿ ನೀಡಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಧುಮೇಹ ನಿವಾರಣೆ ಹಾಗೂ ಲೈಂಗಿಕ ಶಕ್ತಿ ವೃದ್ಧಿ ಹೆಸರಿನಲ್ಲಿ ನಕಲಿ ಔಷಧಿ ನೀಡಿ ವಂಚಿಸುತ್ತಿದ್ದ ಆರೋಪದಡಿ ಬೆಳಗಾವಿ ಜಿಲ್ಲೆಯ ಗೊಕಾಕ್‌ನ ದೀಪಕ್ ಸೇರಿದಂತೆ ನಾಲ್ವರನ್ನು ಇಲ್ಲಿಯ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಇತ್ತೀಚೆಗಷ್ಟೇ ಪ್ರಕರಣ ದಾಖಲಾಗಿತ್ತು. ಅದರ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜನರನ್ನು ವಂಚಿಸುವ ಉದ್ದೇಶದಿಂದಲೇ ನಗರಕ್ಕೆ ಬಂದಿದ್ದ ಆರೋಪಿಗಳು, ನಗರದಲ್ಲಿ ಕಚೇರಿ ಸಹ ತೆರೆದಿದ್ದರು. ನಿತ್ಯವೂ ಬೆಳಿಗ್ಗೆ ಉದ್ಯಾನ ಬಳಿ ಹೋಗು ತ್ತಿದ್ದ ಆರೋಪಿಗಳು, ವಾಯು ವಿಹಾರಕ್ಕೆ ಬರುತ್ತಿದ್ದವರನ್ನು ಪರಿಚಯಿಸಿಕೊಳ್ಳುತ್ತಿದ್ದರು.ಅವರ ಮಾತು ನಂಬಿದ್ದ ಕೆಲವರು ಕಚೇರಿಗೆ ಹೋಗಿದ್ದರು.

ಜಯನಗರ, ಬಸವನಗುಡಿ, ಬನಶಂಕರಿ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಹಲವರನ್ನು ವಂಚಿಸಿರುವ ಮಾಹಿತಿ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು