ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ಕಾಲೇಜು ಕಟ್ಟಡಗಳು ಶಿಥಿಲ

Last Updated 7 ಫೆಬ್ರುವರಿ 2020, 19:23 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ನಲ್ಲಿ ಸೆನೆಟ್‌ ಸಭಾಂಗಣ ಸಹಿತ ಕೆಲವು ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತಕ್ಕೆ ತಲುಪಿದ್ದು, ಕೆಡವಬೇಕೇ ಅಥವಾ ಹಾಗೆಯೇ ಉಳಿಸಿಕೊಳ್ಳಬೇಕೇ ಎಂಬ ಪ್ರಶ್ನೆ ಎದುರಾಗಿದೆ.

ವಿಶ್ವವಿದ್ಯಾಲಯದ ಹಿರಿಯ ಬೋಧಕರ ಸಹಿತ ಪರಿಣಿತರ ತಂಡ ಕಟ್ಟಡಗಳ ಗುಣಮಟ್ಟದ ಬಗ್ಗೆ ಸಮೀಕ್ಷೆ ಮತ್ತು ಆಂತರಿಕ ಲೆಕ್ಕಪರಿಶೋಧನೆ ನಡೆಸಿದಾಗ ಈ ಮಾಹಿತಿ ಬಹಿರಂಗವಾಗಿದೆ.

ಕ್ಯಾಂಪಸ್‌ನಲ್ಲಿರುವ ರಸಾಯನ ವಿಜ್ಞಾನ ಬ್ಲಾಕ್‌, ಗಣಿತ ಬ್ಲಾಕ್‌, ಗ್ರಂಥಾಲಯ, ಗಡಿಯಾರ ಗೋಪುರ, ಕಲ್ಲಿನ ಕಟ್ಟಡಗಳ ಸಹಿತ 7 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕೆಲ ಕಟ್ಟಡಗಳನ್ನು ಕೆಡವಬೇಕಾದ ಸ್ಥಿತಿ ಇದ್ದು, ಕೆಲವನ್ನು ದುರಸ್ತಿ ಮಾಡಿ ಉಳಿಸಿಕೊಳ್ಳಬಹುದಾಗಿದೆ ಎಂದು ಕುಲಪತಿ ಪ್ರೊ.ಎಸ್‌.ಜಾಫೆಟ್ ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಕ್ಯಾಂಪಸ್‌ಗೆ ಭೇಟಿ ನೀಡಿದ ವೇಳೆ ಕಟ್ಟಡಗಳ ಶಿಥಿಲಾವಸ್ಥೆ ಕುರಿತು ಮಾಹಿತಿ ನೀಡಲಾಯಿತು.

‘ಗ್ರಂಥಾಲಯ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಗೋಡೆಗಳಲ್ಲಿ ಬೇರುಗಳೂ ಆಳಕ್ಕೆ ಇಳಿದುಬಿಟ್ಟಿವೆ. ಪರಿಣಿತರ ಸೂಚನೆಯಂತೆ ತೀರಾ ಶಿಥಿಲಾವಸ್ಥೆಯ ಕಟ್ಟಡಗಳನ್ನು ಕೆಡವಲೇಬೇಕಿದ್ದು, ಆ ಸ್ಥಳದಲ್ಲಿ ಲಂಬವಾಗಿ ಕಟ್ಟಡ ನಿರ್ಮಾಣವಾಗಲಿದೆ’ ಎಂದು ಕುಲಪತಿ ಅವರು ವಿವರಿಸಿದರು.

ವಿ.ವಿ ವಿಸ್ತರಣೆಗೆ ಭೂಮಿ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಿಸ್ತರಣೆಗಾಗಿ ನಗರದಲ್ಲಿ ಲಭ್ಯ ಇರುವ ಸರ್ಕಾರಿ ಜಮೀನು ನೀಡಲಾಗುವುದು. ಇದನ್ನು ವಿಶ್ವವಿದ್ಯಾಲಯದ ಉಪ ಕೇಂದ್ರ ಅಥವಾ ಬಾಹ್ಯ ಕೇಂದ್ರ ಎಂಬುದಾಗಿ ಪರಿಗಣಿಸಲಾಗುವುದು ಎಂದು ಉಪಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT