ಭಾನುವಾರ, ಆಗಸ್ಟ್ 14, 2022
24 °C

ಎನ್‌ಟಿಎಸ್‌ಇ ಫಲಿತಾಂಶ: ಚೈತನ್ಯ ಶಾಲೆ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಪ್ರತಿಭಾಶೋಧ ಪರೀಕ್ಷೆಯ (ಎನ್‌ಟಿಎಸ್‌ಇ) ಮೊದಲ ಹಂತದ ಫಲಿತಾಂಶ ಪ‍್ರಕಟವಾಗಿದ್ದು, ಮೊದಲ ಐದು ರ‍್ಯಾಂಕ್‌ಗಳು ಶ್ರೀ ಚೈತನ್ಯ ಶಾಲೆಯ ವಿದ್ಯಾರ್ಥಿಗಳ ಪಾಲಾಗಿದೆ. 

ಮೊದಲ 10 ರ‍್ಯಾಂಕ್‌ಗಳನ್ನು ಶಾಲೆಯ 17 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಶಾಲೆಯ ಪ್ರಕಟಣೆ ಹೇಳಿದೆ.

‘ಕೇಂದ್ರ ಮತ್ತು ರಾಜ್ಯಸರ್ಕಾರ ನಡೆಸುವ ಈ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ನಮ್ಮ ಶಾಲೆಯಿಂದ ಆಯ್ಕೆಯಾಗಿದ್ದಾರೆ. ಶಾಲೆಯ 66 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳ ವರ್ಗದಲ್ಲಿ ರಾಜ್ಯಕ್ಕೇ ಮೊದಲ ರ‍್ಯಾಂಕ್‌, ಸಾಮಾನ್ಯ ವರ್ಗದಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್‌ ನಮ್ಮ ವಿದ್ಯಾರ್ಥಿಗಳ ಪಾಲಾಗಿದೆ. ಮೊದಲ ಹತ್ತು ರ‍್ಯಾಂಕ್‌ಗಳಲ್ಲಿಯೂ ನಮ್ಮ ವಿದ್ಯಾರ್ಥಿಗಳಿದ್ದಾರೆ’ ಎಂದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಬಿ.ಎಸ್. ರಾವ್‌ ಹೇಳಿದ್ದಾರೆ.

‘ಇದಕ್ಕೆ ವಿದ್ಯಾರ್ಥಿಗಳ ಆಸಕ್ತಿ ಮತ್ತು ನಮ್ಮ ಬೋಧಕ ವರ್ಗದವರ ಮಾರ್ಗದರ್ಶನ ಕಾರಣವಾಗಿದೆ‘ ಎಂದೂ ಅವರು ತಿಳಿಸಿದ್ದಾರೆ.

‘ಕಳೆದ ಏಳು ವರ್ಷಗಳಿಂದಲೂ ಎನ್‌ಟಿಎಸ್‌ಇಯಲ್ಲಿ ರಾಜ್ಯದಲ್ಲಿ ನಮ್ಮ ಶಾಲೆಯೇ ಮೊದಲ ಸ್ಥಾನದಲ್ಲಿದೆ’ ಎಂದು ಸಂಸ್ಥೆಯ ಶೈಕ್ಷಣಿಕ ವಿಭಾಗದ ನಿರ್ದೇಶಕಿ ಸೀಮಾ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು