ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್‌ ರಾವ್‌ಗಿಂತ ಪತ್ನಿಯೇ ಶ್ರೀಮಂತೆ

Last Updated 18 ಏಪ್ರಿಲ್ 2023, 6:34 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ರಾವ್‌ ಅವರ ಒಟ್ಟು ಆಸ್ತಿಯ ಮೌಲ್ಯ ₹ 23.92 ಕೋಟಿಯಾಗಿದೆ.

ಪತ್ನಿ ಡಾ.ಚಂದ್ರಿಕಾರಾವ್‌ ಅವರು ₹ 2.38 ಕೋಟಿ ಚರಾಸ್ತಿ, ₹ 13.99 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಭಾಸ್ಕರ್‌ರಾವ್‌ ಅವರು ₹2.81 ಕೋಟಿಯ ಚರಾಸ್ತಿ ಹಾಗೂ ₹4.75 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತಿಗಿಂತಲೂ ಪತ್ನಿಯೇ ಶ್ರೀಮಂತೆಯಾಗಿದ್ದಾರೆ.

₹ 35.48 ಲಕ್ಷ ಮೌಲ್ಯದ ಮೂರು ಕಾರು, ಒಂದು ಸ್ಕೂಟಿಯಿದೆ. ಪತ್ನಿಯ ಬಳಿ ₹ 37.50 ಲಕ್ಷದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳಿದ್ದರೆ, ಭಾಸ್ಕರ್‌ರಾವ್‌ ಬಳಿ ₹ 5 ಲಕ್ಷದ ಚಿನ್ನಾಭರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT