ಬೆಂಗಳೂರು: ನಗರ ವ್ಯಾಪ್ತಿಯ ಒಳಭಾಗದಲ್ಲಿ ಭಾರಿ ವಾಹನ ಸಂಚಾರದ ಸಮಯವನ್ನು ಪೊಲೀಸರು ಬದಲಾವಣೆ ಮಾಡಿದ್ದಾರೆ.
ಶನಿವಾರ ಮಾತ್ರ ಭಾರಿ ವಾಹನಗಳ ಸಂಚಾರವನ್ನು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30 ಗಂಟೆಯ ವರೆಗೆ ಹಾಗೂ ಸಂಜೆ 4.30ರಿಂದ ರಾತ್ರಿ 9ರ ವರೆಗೆ ನಿರ್ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಉಳಿದ ಆರು ದಿನ ಬೆಳಿಗ್ಗೆ 7ರಿಂದ 11ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10 ಗಂಟೆ ವರೆಗೆ ಮೊದಲಿನಂತೆಯೇ ಭಾರಿ ವಾಹನಗಳ ನಿರ್ಬಂಧ ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ. ಸ