ಮಂಗಳವಾರ, ಮಾರ್ಚ್ 28, 2023
23 °C

ಆಹಾರ ಕಿಟ್‌ ಅವ್ಯವಹಾರ ತನಿಖೆಗೆ ಆಗ್ರಹ- ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಆಹಾರ ಕಿಟ್‌ ಹಂಚಿಕೆಯಲ್ಲಿ ಅವ್ಯವಹಾರವಾಗಿದ್ದು, ಇದರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಸೋಮವಾರ ಪ್ರತಿಭಟನೆ ಮಾಡಿದರು.

ನಗರ ಮಾತ್ರವಲ್ಲದೆ, ತುಮಕೂರು, ಕೋಲಾರ, ಕಲಬುರ್ಗಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಂಡ್ಯ, ಧಾರವಾಡ ಸೇರಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಕಾರ್ಮಿಕರು ಪ್ರತಿಭಟಿಸಿದರು.

ಕಾರ್ಮಿಕರಿಂದ ಮನವಿ ಸ್ವೀಕರಿಸಿದ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ, ಕಾರ್ಮಿಕರ ಸಮನ್ವಯ ಸಮಿತಿ ಮುಖಂಡರ ಜೊತೆ ಮಾತುಕತೆ ನಡೆಸಿದರು.

ಬಾಕಿ ಇರುವ ಕೊವೀಡ್ ಪರಿಹಾರ, ಆಹಾರ ಕಿಟ್ ಹಂಚಿಕೆಯನ್ನು ಶಾಸಕರಿಗೆ ವಹಿಸಿರುವುದು, ವೈದ್ಯಕೀಯ ಪರಿಹಾರ, ಮನೆಗೆ ಧನಸಹಾಯ ಪಿಂಚಣಿ ಸೇರಿ ಇತ್ಯಾದಿ ಅಂಶಗಳ ಕುರಿತು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಸಮನ್ವಯ ಸಮಿತಿ ಮುಖಂಡರು ಆಗ್ರಹಿಸಿದರು.

ಸಮನ್ವಯ ಸಮಿತಿಯ ಮುಖಂಡರಾದ ಕೆ.ಮಹಾಂತೇಶ, ಶಾಮಣ್ಣ ರೆಡ್ಡಿ ಎನ್.ಪಿ ಸ್ವಾಮಿ, ನಾಗನಾಥ್, ಅಪ್ಪಣ್ಣ,‌ ಲಿಂಗರಾಜ್, ಲಕ್ಷ್ಮೀ, ಲಕ್ಷ್ಮಣ್‌ ಕುಮಾರ್,‌ ವಿನಯ್ ಶ್ರೀನಿವಾಸ್, ಲೀಲಾವತಿ ಧನಶೇಖರ್, ಹನುಮೇಶ್, ಶ್ರೀಕಾಂತ, ಹರೀಶಕುಮಾರ್, ಹನುಮಂತರಾವ್ ಹವಾಲ್ದಾರ್ ಸೇರಿ ಹಲವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು