ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರದ ಹೋಟೆಲ್‌ನಲ್ಲಿ ಉಗಾಂಡಾ ಪ್ರಜೆಗಳು-ಕ್ಯಾಬ್ ಚಾಲಕರ‌ ನಡುವೆ ಗಲಾಟೆ

Last Updated 19 ಸೆಪ್ಟೆಂಬರ್ 2021, 6:52 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾಬ್ ಬುಕ್ಕಿಂಗ್ ಹಾಗೂ‌ ಹೆಚ್ಚುವರಿ‌ ಸೀಟಿನ ವಿಚಾರವಾಗಿ‌ ಉಗಾಂಡಾ ‌ಪ್ರಜೆಗಳು‌ ಮತ್ತು ಕ್ಯಾಬ್‌ ಚಾಲಕರ‌ ನಡುವೆ ರಾಜಾಜಿನಗರದ ಹೋಟೆಲೊಂದರಲ್ಲಿ‌ ಗಲಾಟೆ‌ ನ‌ಡೆದಿದೆ.

ಶನಿವಾರ ರಾತ್ರಿ‌ ನಡೆದಿರುವ‌ ಗಲಾಟೆ ಸಂಬಂಧ ಸುಬ್ರಮಣ್ಯ ನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

'ಹೋಟೆಲ್‌ಗೆ ಬರಲು ಉಗಾಂಡಾ ಪ್ರಜೆಗಳು‌ ಕ್ಯಾಬ್‌ ಕಾಯ್ದಿರಿಸಿದ್ದರು. ನಾಲ್ಕು‌ ಪ್ರಯಾಣಿಕರ‌ ಬದಲು, ಐವರು ಹತ್ತಿದ್ದರು.‌ ಇದನ್ನು ಪ್ರಶ್ನಿಸಿದ್ದ ಚಾಲಕ, ಹೆಚ್ಚುವರಿ ಸೀಟಿಗೆ ₹100 ಕೊಡಬೇಕು ಎಂದಿದ್ದ' ಎಂದು ಪೊಲೀಸ್ ಮೂಲಗಳು‌ ಹೇಳಿವೆ.

'ಹೋಟೆಲ್‌ಗೆ ಬರುತ್ತಿದ್ದಂತೆ ಗಲಾಟೆ ಆರಂಭಿಸಿದ್ದ ಪ್ರಜೆಗಳು, ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಸ್ಥಳದಲ್ಲಿದ್ದ ಇತರೆ ಚಾಲಕರು ಮಧ್ಯಪ್ರವೇಶಿಸಿದ್ದರು. ಈ ವೇಳೆ ಪರಸ್ಪರ ಹಲ್ಲೆ ಘಟನೆ ನಡೆಯಿತು'.

'ಸ್ಥಳಕ್ಕೆ ಹೋದ‌ ಪೊಲೀಸರು, ಉಗಾಂಡಾ ಪ್ರಜೆಯೊಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ತನಿಖೆ ನಡೆದಿದೆ' ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT