ಶುಕ್ರವಾರ, ನವೆಂಬರ್ 22, 2019
20 °C

ಅನರ್ಹ ಶಾಸಕರ ರಾಜೀನಾಮೆ ಚರ್ಚೆ ಅನವಶ್ಯಕ: ಬಿಎಸ್‌ವೈ

Published:
Updated:
Prajavani

ಬೆಂಗಳೂರು: ‘ಹದಿನೇಳು ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದು, ಅವರು ರಾಜೀನಾಮೆ ಏಕೆ ಕೊಟ್ಟರು, ಯಾರಿಗಾಗಿ ಕೊಟ್ಟರು ಎಂಬುದು ಅನವಶ್ಯಕ’ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ಆಡಿಯೊದಿಂದ ಉಂಟಾಗಿರುವ ವಿವಾದದ ಕುರಿತಂತೆ ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಈ ಶಾಸಕರ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಬರುವುದಕ್ಕಿಂತ ಮೊದಲು ಚರ್ಚೆ ಮಾಡುವುದು ಅನಗತ್ಯ. ಮುಂದಿನ ದಿನಗಳಲ್ಲಿ ಇವರ ಬಗ್ಗೆ ಪಕ್ಷದ ಹೈಕಮಾಂಡೇ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ’ ಎಂದು ಹೇಳಿದ್ದಾರೆ.

‘ಅನರ್ಹ ಶಾಸಕರು ಮುಂಬೈನಲ್ಲಿ ಇದ್ದದ್ದು ಕೇಂದ್ರ ನಾಯಕರುಗಳಿಗೂ ಗೊತ್ತಿರುವ ವಿಷಯ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ವಕೀಲರಾಗಿದ್ದು ಇಂತಹ ಕ್ಷುಲಕ, ಕಾನೂನಿನ ಯಾವುದೇ ಮೌಲ್ಯವಲ್ಲದ ವಿಷಯದ ಬಗ್ಗೆ ಮಾತನಾಡುವುದು ಅವರ ಕಾನೂನಿನ ಜ್ಞಾನದ ಬಗ್ಗೆ ಜನರಿಗೆ ಅನುಮಾನ ಮೂಡಿಸುತ್ತದೆ. ಇಂತಹ ಧ್ವನಿ ಸುರುಳಿ ಮತ್ತು ಜನರ ಹೇಳಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಕೊಟ್ಟ ತೀರ್ಪುಗಳನ್ನು ಒಮ್ಮೆ ಅವಲೋಕಿಸಿ ನೋಡಲಿ, ಆಗ ಅವರಿಗೆ ಧ್ವನಿ ಸುರುಳಿಯ ಕಾನೂನಿನ ಮೌಲ್ಯ ಗೊತ್ತಾಗುತ್ತದೆ’ ಎಂದು ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)