ಮೈಸೂರು: ‘ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ಸನ್ಮಾನ ಸಮಾರಂಭದ ವೇಳೆ ನಡೆದಿರುವ ಘಟನೆಯಲ್ಲಿ ತಪ್ಪುಗಳು ಆಗಿರುವುದು ಸತ್ಯ. ಸರ್ಕಾರವೂ ಅದನ್ನು ಒಪ್ಪಿಕೊಂಡಿದೆ’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಗುರುವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಿರೀಕ್ಷೆಗಿಂತ ಅತಿ ಹೆಚ್ಚು ಜನ ಬಂದಿದ್ದಾರೆ. ಹೀಗಾಗಿ ಇಂತಹ ಘಟನೆ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದಾಗಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದ್ದಾಗಲಿ ಯಾವುದೇ ತಪ್ಪಿಲ್ಲ. ಕಾರ್ಯಕ್ರಮ ನಡೆಸಲು ಸರ್ಕಾರದ ಮೇಲೆ ಒತ್ತಡ ಇತ್ತು’ ಎಂದರು.

‘ವಿಧಾನಸೌಧದ ಮುಂದೆ ಮಾಡಿದ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಉಂಟಾಗಿಲ್ಲ. ಅಲ್ಲಿಗೆ ಅತಿ ಹೆಚ್ಚು ಜನ ಬರಲೇ ಇಲ್ಲ. ಸಚಿವರು, ಅವರ ಸಂಬಂಧಿಕರು ಹಾಗೂ ಕುಟುಂಬದವರು ಬಂದಿರಬಹುದು. ಅದರಲ್ಲಿ ಯಾವ ಲೋಪವೂ ಉಂಟಾಗಿಲ್ಲ. ಜನರು ಕ್ರಿಕೆಟಿಗರನ್ನು ನೋಡಲು ಸ್ಟೇಡಿಯಂಗೆ ಹೋದರು. ಅಲ್ಲಿ ಸಮಸ್ಯೆಯಾಗಿದೆ’ ಎಂದು ಹೇಳಿದರು.

‘ಆರ್ಸಿಬಿ ತಂಡಕ್ಕೆ ಸನ್ಮಾನ ಸಮಾರಂಭ ಆಯೋಜಿಸಬೇಕು ಎಂದು ಹೇಳುತ್ತಿದ್ದ ಬಿಜೆಪಿ ಈಗ ನಾಟಕ ಮಾಡುತ್ತಿದೆ. ಕಾರ್ಯಕ್ರಮ ಆಯೋಜನೆಯಲ್ಲಿ ತಪ್ಪಾಗಿರುವುದು ಸತ್ಯ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲೆಂದೇ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶ ನೀಡಲಾಗಿದ್ದು, ವಿಚಾರಣಾಧಿಕಾರಿಯನ್ನೂ ನೇಮಿಸಲಾಗಿದೆ. ಇಂಥವರೇ ತಪ್ಪಿತಸ್ಥರೆಂದು ಈಗಲೇ ನಿರ್ಧಾರಕ್ಕೆ ಬರಲಾಗದು’ ಎಂದು ತಿಳಿಸಿದರು.

‘ಒಂದು ವೇಳೆ ರೋಡ್ ಶೋ ಮಾಡಿದ್ದರೆ ಕ್ರಿಕೆಟಿಗರ ಭದ್ರತೆಗೆ ತೊಂದರೆ ಆಗುತ್ತಿತ್ತು. ಹೀಗಾಗಿ ನಡೆಸಲಿಲ್ಲ. ಎರಡೆರಡು ಕಡೆ ಕಾರ್ಯಕ್ರಮ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎನ್ನುವುದೂ ಸರಿಯಲ್ಲ’ ಎಂದರು.
.ಏನು ಭದ್ರತೆ ಕೈಗೊಂಡಿದ್ರಿ? 'RCB ಕಾಲ್ತುಳಿತ'ದ ಬಗ್ಗೆ ಹೈಕೋರ್ಟ್ ಪಿಐಎಲ್ ದಾಖಲು.ಕಾಲ್ತುಳಿತ: ಗೃಹ ಸಚಿವ ಪರಮೇಶ್ವರ ರಾಜೀನಾಮೆ ಕೊಡಲಿ– ಶಾಸಕ ಆರಗ ಜ್ಞಾನೇಂದ್ರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.