ಬೆಂಗಳೂರು: ವಾಣಿಜ್ಯ ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಲು ಸಾಕಷ್ಟು ಅವಕಾಶ ಇದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಎ.ಎಸ್. ಓಕಾ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ಮೆಗಾ ಲೋಕ ಅದಾಲತ್ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ಲೋಕ ಅದಾಲತ್ ಮೂಲಕ ಈ ವ್ಯಾಜ್ಯಗಳನ್ನು ಬಗೆಹರಿಸಲು ಲೆಕ್ಕ ಪರಿಶೋಧಕರು, ತಜ್ಞರ ಸಹಭಾಗಿತ್ವ ಅಗತ್ಯ. ಅಪಘಾತ ಪರಿಹಾರ ಪ್ರಕರಣ ಗಳನ್ನು ಸಹ ವಿಚಾರಣೆಗೆ ಬರುವ ಮೊದಲೇ ಲೋಕ ಅದಾಲತ್ಗೆ ವರ್ಗಾ ಯಿಸಿ ಬಗೆಹರಿಸಬಹುದು. ಹೀಗೆ ಹೊಸ ಸಾಧ್ಯತೆಗಳು ಮತ್ತು ಆಲೋಚನೆಗಳ ಕಡೆಗೆ ಮುಖಮಾಡುವ ಅವಶ್ಯಕತೆ ಇದೆ’ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಮಾತನಾಡಿ, ‘ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ತಮ್ಮ ಹಕ್ಕು ಮತ್ತು ಹೊಣೆಗಾರಿಕೆಗಳ ಅರಿವೇ ಇರದ ಮಹಿಳೆಯರು ಮತ್ತು ಕಾರ್ಮಿಕರಿಗೆ ತಿಂಗಳಿಗೆ ಒಮ್ಮೆಯಾ ದರೂ ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಹಣಾ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಾತನಾಡಿ, ‘ಕೋವಿಡ್ ಎರಡೂ ಅಲೆಗಳ ನಡುವೆಯೂ ಮೂರು ಬಾರಿ ಇ-ಲೋಕ ಅದಾಲತ್ ಅತ್ಯಂತ ಯಶಸ್ವಿಯಾಗಿ ನಡೆದಿದೆ. 2020ರ ಸೆಪ್ಟೆಂಬರ್ನಲ್ಲಿ 2.31 ಲಕ್ಷ ಪ್ರಕರಣಗಳನ್ನು ಗುರುತಿಸಿದ್ದು, ಇದರಲ್ಲಿ 1.15 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದೇ ರೀತಿ, 2020ರ ಡಿಸೆಂಬರ್ನಲ್ಲಿ ನಡೆದ ಅದಾಲತ್ನಲ್ಲಿ 4.64 ಲಕ್ಷ ಪ್ರಕರಣಗಳ ಪೈಕಿ 2.63 ಲಕ್ಷ ಪ್ರಕರಣ ಬಗೆಹರಿಸಲಾಗಿದೆ. ಇನ್ನು 2021ರ ಮಾರ್ಚ್ನಲ್ಲಿ ಅತಿ ಹೆಚ್ಚು 5.44 ಲಕ್ಷ ಪ್ರಕರಣಗಳನ್ನು ಪತ್ತೆ ಮಾಡಿ, 3.32 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.