ಮಂಗಳವಾರ, ಜೂನ್ 15, 2021
22 °C

ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಪ್ರಮುಖ ಆರೋಪಿ ಖಾಲೀದ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಎಸ್‍ಡಿಪಿಐ ಕಾರ್ಯಕರ್ತ ಖಾಲೀದ್ ಮುಜಾಮಿಲ್‍ನನ್ನು ಡಿ.ಜೆ.ಹಳ್ಳಿ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದರು.

ಡಿ.ಜೆ.ಹಳ್ಳಿಯ ರೋಷನ್ ನಗರದ ನಿವಾಸಿಯಾಗಿದ್ದ ಖಾಲೀದ್, ಅಯಾಜ್ ಹಾಗೂ ಆಪ್ನಾನ್ ಜೊತೆಗೂಡಿ ಎಸ್‍ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿದ್ದ ಎಂದು ಆರೋಪಿಸಲಾಗಿದೆ.ಜೆಡಿಎಸ್ ಮುಖಂಡ ವಾಜಿದ್ ಜೊತೆಗೆ ಖಾಲೀದ್ ಸಂಪರ್ಕದಲ್ಲಿದ್ದ. ಹಲವು ರಾಜಕೀಯ ನಾಯಕರ ಜೊತೆಗೂ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಗಲಭೆ ನಡೆಸಲು ಕಿಡಿಗೇಡಿಗಳಿಗೆ ಪ್ರಚೋದನೆ ಹಾಗೂ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿ, ಸಾರ್ವಜನಿಕರಿಗೆ ಬೆದರಿಕೆ ಹಾಕಿರುವ ಆರೋಪದಡಿ ಮುಕ್ಬುಲ್‍ನನ್ನು ಡಿ.ಜೆ.ಹಳ್ಳಿ ಪೊಲೀಸರು ಗುರುವಾರ ಬಂಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು