ಬೆಂಗಳೂರು: ನಗರದ ಕನಕಶ್ರೀ ಸಂಕೀರ್ಣದಲ್ಲಿ ಇನ್ಸೈಟ್ಸ್ ಐಎಎಸ್ ಮತ್ತು ಕನಕಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೆಎಎಸ್ ಸಹಿತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗದ ಆಕಾಂಕ್ಷಿಗಳಿಗೆ ತರಬೇತಿ ನೀಡಲು ನಿರ್ಧರಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ವಿನಯಕುಮಾರ್ ಜಿ.ಬಿ. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಯುಪಿಎಸ್ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆಗಳ ಪೈಕಿ ರಾಜ್ಯದಲ್ಲಿಯೇ ಇನ್ಸೈಟ್ಸ್ ಐಎಎಸ್ ಅಗ್ರ ಪಂಕ್ತಿಯಲ್ಲಿದೆ. ಇಲ್ಲಿನ ನುರಿತ ಮತ್ತು ಅನುಭವಿ ಬೋಧನಾ ಸಿಬ್ಬಂದಿ ತರಬೇತಿ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಆಸಕ್ತರಿಗೆ ಉಚಿತ ವಸತಿ ಒದಗಿಸಲಾಗುವುದು. ವಿಶಾಲವಾದ ಅಧ್ಯಯನ ಕೇಂದ್ರದಲ್ಲಿ ಶಿಬಿರ ನಡೆಯಲಿದೆ. ರಿಯಾಯಿತಿ ದರದಲ್ಲಿ ಊಟೋಪಾಹಾರ ಇರಲಿದೆ. ಶಿಬಿರ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದರು.

ಮಾಹಿತಿಗಾಗಿ ಮತ್ತು ಪ್ರವೇಶಾವಕಾಶಕ್ಕಾಗಿ ಇನ್ಸೈಟ್ಸ್ ಐಎಎಸ್, ನಂದ ಆಶೀರ್ವಾದ್ ಕಾಂಪ್ಲೆಕ್ಸ್, 3ನೇ ಮಹಡಿ, ಚಂದ್ರಾ ಲೇಔಟ್ ಬೆಂಗಳೂರು–560072, ದೂರವಾಣಿ: 08069405205 ಸಂಪರ್ಕಿಸಬಹುದು ಎಂದು ಹೇಳಿದರು.

ಕನಕಶ್ರೀ ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬಳಗಾವಿ, ಕಾರ್ಯದರ್ಶಿ ಪಿ.ಎನ್. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.