ಬೆಂಗಳೂರು: ಲಾಭ ರಹಿತ ಸಂಸ್ಥೆಯಾದ ಮಿತ್ರ ಕ್ಯಾನ್‌ಕೇರ್ ಫೌಂಡೇಶನ್ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಇದೇ 29ರಂದು ಸಂಜೆ 6ರಿಂದ ಚೌಡಯ್ಯ ಸ್ಮಾರಕ ಭವನದಲ್ಲಿ ಹಿಂದೂಸ್ತಾನಿ ಸಂಗೀತ ಕಛೇರಿ ಹಮ್ಮಿಕೊಂಡಿದೆ.

‘ಪದ್ಮಭೂಷಣ ಪ್ರಶಸ್ತಿ’ ಪುರಸ್ಕೃತ ಪಿಟೀಲು ವಾದಕ ಎಲ್. ಸುಬ್ರಮಣ್ಯಂ ಅವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಪಿಟೀಲು ವಾದಕ ಅಂಬಿ ಸುಬ್ರಮಣ್ಯಂ, ಮೃದಂಗ ವಾದಕ ವಿ.ವಿ. ರಮಣಮೂರ್ತಿ, ಘಟ ವಾದಕ ಎನ್. ರಾಧಾಕೃಷ್ಣನ್, ಮೋರ್ಸಿಂಗ್ ವಾದಕ ಜಿ. ಸತ್ಯ ಸಾಯಿ ಹಾಗೂ ಖಂಜಿರಾ ವಾದಕಿ ಬಿ.ಆರ್. ಲತಾ ಸಾಥ್ ನೀಡಲಿದ್ದಾರೆ.

‘ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗೆ ಆರ್ಥಿಕ ನೆರವು ನೀಡುವುದು ನಮ್ಮ ಉದ್ದೇಶವಾಗಿದೆ. ಹಣಕಾಸಿನ ಸಮಸ್ಯೆಯಿಂದ ಸಕಾಲದಲ್ಲಿ ಚಿಕಿತ್ಸೆ ಒದಗಿಸಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಆರಂಭಿಕ ಹಂತದಲ್ಲಿಯೇ ರೋಗ ನಿರ್ಣಯ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಸುಲಭವಾಗಿ ವಾಸಿ ಮಾಡಬಹುದು. ಪ್ರಾಯೋಜಕತ್ವದಿಂದ ಸಂಗ್ರಹಿಸಲಾದ ನಿಧಿಯನ್ನು ಮಕ್ಕಳ ಚಿಕಿತ್ಸೆಗೆ ಒದಗಿಸಲಾಗುತ್ತದೆ’ ಎಂದು ಫೌಂಡೇಶನ್ ಪ‍್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.