ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಬಿಜೆಪಿಯವರು ಮಾತ್ರ ಸ್ವಯಂಸೇವಕರಾ?: ಗೋಪಾಲಕೃಷ್ಣ ಕಿಡಿ

ಮನೆ ಮನೆ ಸಮೀಕ್ಷೆ
Last Updated 15 ಜುಲೈ 2020, 21:32 IST
ಅಕ್ಷರ ಗಾತ್ರ

ಹೆಸರಘಟ್ಟ: ‘ಮನೆ ಮನೆಗೆ ತೆರಳಿ ಕೊರೊನಾ ಸರ್ವೆ ಮಾಡುತ್ತಿರುವ ತಂಡದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಅವರು ಮಾತ್ರ ಸ್ವಯಂಸೇವಕರೇ? ಬೇರೆ ಯಾರು ಸ್ವಯಂಸೇವಕರು ಇಲ್ಲವೇ? ಇಡೀ ಯಲಹಂಕ ತಾಲ್ಲೂಕು ಆಡಳಿತದ ಅಧಿಕಾರಿಗಳು ಬಿಜೆಪಿ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ’ ಎಂದು ಯಲಹಂಕ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಹೆಸರಘಟ್ಟ ಗ್ರಾಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಕೊರೊನಾ ಸರ್ವೆ ಕೆಲಸಕ್ಕೆ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಆದರೆ, ಇವರ ಜೊತೆ ಬಿಜೆಪಿ ಕಾರ್ಯಕರ್ತರು ಹೋಗುತ್ತಿದ್ದಾರೆ. ಇವರನ್ನು ನೇಮಕ ಮಾಡಿದವರು ಯಾರು? ಯಲಹಂಕ ತಹಶೀಲ್ದಾರ್‌ ರಘುಮೂರ್ತಿ ಅವರು ರಾಜಕಾರಣಿಗಳ ಹಿಂದೆ ಓಡಾಡುವುದನ್ನು ಬಿಟ್ಟು ಕಚೇರಿಯಲ್ಲಿ ಕುಳಿತು ಜನತೆಯ ಕೆಲಸ ಮಾಡಲಿ’ ಎಂದು ಹೇಳಿದರು.

ಯಲಹಂಕ ತಹಶೀಲ್ದಾರ್‌ ರಘುಮೂರ್ತಿ ಪ್ರತಿಕ್ರಿಯಿಸಿ, ‘ಬಿಜೆಪಿ ಕಾರ್ಯಕರ್ತರನ್ನು ನಾವು ನೇಮಕ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT