ಬೆಂಗಳೂರು: ನಗರದ ಸೌಂದರ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳ ತನಿಖೆ ಆರಂಭಿಸಿದೆ.

ಸೌಂದರ್ಯ ಸೊಸೈಟಿಯ ಸದಸ್ಯ ಶಂಕರಗೌಡ ಜೋಗರೆಡ್ಡಿ ಅವರು ನಗರ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದರು.

‘ಸೌಂದರ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಮಂಜಪ್ಪ, ಅವರ ಪತ್ನಿ ಎಂ.ಸುನೀತಾ ಸೇರಿದಂತೆ ಇತರರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, 2020 ರಿಂದ 2024ರ ಅವಧಿಯಲ್ಲಿ ನಡೆದ ₹14 ಕೋಟಿ ಸಾಲ ಮಂಜೂರಾತಿಯಲ್ಲಿ ಅಕ್ರಮ ಎಸಗಿದ್ದಾರೆ’ ಎಂದು ದೂರುದಾರರು ಆರೋಪಿಸಿದ್ದಾರೆ.

‘ಕೋ ಆಪರೇಟಿವ್ ಸೊಸೈಟಿ ನಿಯಮ ಉಲ್ಲಂಘನೆ, ಸಾಲ ನೀಡಿಕೆಯಲ್ಲಿ ಅಕ್ರಮ ಹಾಗೂ ಅಧಿಕಾರ ದುರ್ಬಳಕೆ ಆರೋಪ ಕುರಿತು ಸೊಸೈಟಿ ವಿರುದ್ಧ ದಾಖಲಾಗಿರುವ ದೂರಿನ ಅನ್ವಯ ಪ್ರಾಥಮಿಕ ವಿಚಾರಣೆ ನಡೆಸಲಾಗುತ್ತಿದೆ. ಹಲವು ದಾಖಲೆಗಳ ಪರಿಶೀಲನೆ ನಡೆದಿದೆ’ ಎಂದು ಸಿಸಿಬಿ ಡಿಸಿಪಿ ಶ್ರೀಹರಿಬಾಬು ತಿಳಿಸಿದ್ದಾರೆ.

ಸಹಕಾರ ಇಲಾಖೆಯಿಂದಲೂ ತನಿಖೆ: ಸೊಸೈಟಿಯಲ್ಲಿ ನಡೆದಿರುವ ಹಣ ದುರ್ಬಳಕೆ ಆರೋಪ ಸಂಬಂಧ ಸಹಕಾರ ಇಲಾಖೆ ನಿಬಂಧಕರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಸೊಸೈಟಿಯ ಐದು ವರ್ಷಗಳ ಆಯ-ವ್ಯಯದ ಲೆಕ್ಕ ಪರಿಶೋಧನೆಯು ನಡೆದಿದೆ. ಹೀಗಾಗಿ, ಸಹಕಾರ ಇಲಾಖೆ ತನಿಖಾ ವರದಿಯನ್ನು ಪಡೆಯಲಾಗುವುದು ಎಂದು ತನಿಖಾ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.