ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯದಲ್ಲೂ ಮಾಲ್‌ಗಳು ಖಾಲಿ ಖಾಲಿ

Last Updated 14 ಜೂನ್ 2020, 20:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ಶಾಪಿಂಗ್ ಮಾಲ್‍ಗಳಲ್ಲಿ ಭಾನುವಾರವೂ ಬೆರಳೆಣಿಕೆಯಷ್ಟು ಗ್ರಾಹಕರು ಕಂಡು ಬಂದರು.ಎಲ್ಲ ಮಾಲ್‍ಗಳ ಸಿಬ್ಬಂದಿ ಎಂದಿನಂತೆ ಮಳಿಗೆಗಳನ್ನು ತೆರೆದು, ಗ್ರಾಹಕರ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ, ನಿರೀಕ್ಷಿತ ಸಂಖ್ಯೆಯಲ್ಲಿ ಗ್ರಾಹಕರು ಬರಲಿಲ್ಲ.

ಮಂತ್ರಿ ಮಾಲ್, ಫೋರಂ ಮಾಲ್, ಗರುಡಾ ಮಾಲ್, ಗೋಪಾಲನ್ ಮಾಲ್, ಒರಾಯನ್ ಮಾಲ್‍ಗಳಲ್ಲಿ ವಾರಾಂತ್ಯದಲ್ಲಿ ಹೆಚ್ಚು ಜನ ಸೇರುತ್ತಿದ್ದರು. ಕಾಲೇಜುಗಳಿಗೆ ರಜೆ ಇರುವುದರಿಂದ ಯುವಜನರು ಮಾಲ್‌ಗಳಿಗೆ ಬರುತ್ತಿಲ್ಲ. ಮಾಲ್‍ಗಳಲ್ಲಿ ಮನರಂಜನೆ ಚಟುವಟಿಕೆಗಳು ನಿಂತಿರುವುದರಿಂದ ಜನ ಸೇರುತ್ತಿಲ್ಲ.

‘ಮಾಲ್‍ಗಳಲ್ಲಿ ಸೋಂಕು ನಿವಾರಕಗಳಿಂದ ಸ್ವಚ್ಛ ಮಾಡುವುದು, ಗ್ರಾಹಕರಿಗೆ ಸ್ಯಾನಿಟೈಸರ್ ಹಾಗೂ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಸೇರಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ. ಆದರೂ, ಜನರು ಬರುತ್ತಿಲ್ಲ‘ ಎಂದು ಮಂತ್ರಿ ಮಾಲ್‌ನ ಸಿಬ್ಬಂದಿಯೊಬ್ಬರು ಹೇಳಿದರು.

'ಕೊರೊನಾ ಸೋಕು ಹರಡುವ ಭೀತಿಯಿಂದ ಗ್ರಾಹಕರು ಮಾಲ್‍ಗಳಿಗೆ ಬರುತ್ತಿಲ್ಲ. ಇದರಿಂದ ವ್ಯಾಪಾರ ನೆಲಕಚ್ಚಿದೆ' ಎಂದು ಮಾಲ್‍ವೊಂದರ ಸಿಬ್ಬಂದಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT