ಶುಕ್ರವಾರ, ಫೆಬ್ರವರಿ 28, 2020
19 °C
ನಗರದಲ್ಲಿ ಮುಂದುವರಿದ ಕೊರೊನಾ ಭೀತಿ

ಕೊರೊನಾ ಭೀತಿ: ವಿದೇಶದಿಂದ ನಗರಕ್ಕೆ ಬರುವವರ ಸಂಖ್ಯೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವೈರಸ್‌ ಭೀತಿಯ ಬೆನ್ನಲ್ಲೇ ಸೋಂಕು ಕಾಣಿಸಿದ ದೇಶಗಳಿಂದ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗಿರುವುದು ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು 27 ದೇಶಗಳನ್ನು ಈಗಾಗಲೇ ಪ್ರವೇಶಿಸಿದೆ. ಅಧಿಕ ಪ್ರಕರಣಗಳು ವರದಿಯಾಗಿರುವ ಚೀನಾ, ಹಾಂಕಾಂಗ್ ಹಾಗೂ ಸಿಂಗಪುರದಿಂದ ಬರುವ ಪ್ರಯಾಣಿಕರನ್ನು ಪ್ರತಿನಿತ್ಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈವರೆಗೆ 10,184 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಯಾವುದೇ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿಲ್ಲ.

ಆದರೆ, ಆ ರಾಷ್ಟ್ರಗಳಿಂದ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಮಾತ್ರ ಗಣನೀಯ ಏರಿಕೆಯಾಗಿದೆ.

ಜ.20ರಿಂದ ಜ.31ರವರೆಗೆ ಕೊರೊನಾ ಪ್ರಕರಣ ಅಧಿಕ ವರದಿಯಾದ ದೇಶಗಳಿಂದ ಪ್ರತಿನಿತ್ಯ ಸರಾಸರಿ 400 ಮಂದಿ ಪ್ರಯಾಣಿಕರು ಬಂದಿದ್ದಾರೆ. ಫೆ.1ರಿಂದ ಪ್ರತಿನಿತ್ಯ ಸರಾಸರಿ 1,400 ಮಂದಿ ಆ ದೇಶಗಳಿಂದಲೇ ಬರುತ್ತಿದ್ದಾರೆ. ಬುಧವಾರ ಚೀನಾದಿಂದ ಯಾವುದೇ ವಿಮಾನ ನಗರ ಪ್ರವೇಶಿಸಿಲ್ಲ. 

ಹಾಂಕಾಂಗ್‌ನಿಂದ 1, ಥಾಯ್ಲೆಂಡ್‌ನಿಂದ 4 ಹಾಗೂ ಸಿಂಗಪುರದಿಂದ 3 ವಿಮಾನಗಳು ಬಂದಿದ್ದು, ಒಟ್ಟು 888 ಪ್ರಯಾಣಿಕರು ಕೆಐಎನಲ್ಲಿ ತಪಾಸಣೆಗೆ ಒಳಪಟ್ಟಿದ್ದಾರೆ. 

ಇದುವರೆಗೆ 52 ಮಂದಿಯ ರಕ್ತದ ಮಾದರಿಗಳಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿಲ್ಲ.

ಬುಧವಾರ ಮತ್ತೆ ಐವರು ಶಂಕಿತರ ರಕ್ತದ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಸೇರಿದಂತೆ ಒಟ್ಟು 74 ಮಂದಿಯ ರಕ್ತದ ಮಾದರಿಗಳ ಕುರಿತ ವರದಿ ಇನ್ನಷ್ಟೇ ಬರಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು