ಮಂಗಳವಾರ, ಆಗಸ್ಟ್ 3, 2021
21 °C
ವಿಜಿನಾಪುರ ವಾರ್ಡ್‌ನಲ್ಲಿ ಫಲಾನುಭವಿಗಳಿಗೆ ಸಚಿವರಿಂದ ಸೌಲಭ್ಯ ವಿತರಣೆ

ಬೆಂಗಳೂರು: ‘ಹೊರ ರಾಜ್ಯದವರಿಂದ ಸೋಂಕು ಹೆಚ್ಚಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ‘ಹೊರ ರಾಜ್ಯಗಳಿಂದ ಬಂದವರಿಂದಲೇ ರಾಜ್ಯದಲ್ಲಿ ಕೊರೊನಾ ಸೋಂಕು ದಿಢೀರನೆ ಏರಿಕೆಯಾಗುತ್ತಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.

ವಿಜಿನಾಪುರದ ಕುವೆಂಪು ಆಟದ ಮೈದಾನದಲ್ಲಿ ವಾರ್ಡ್‌ನ ಫಲಾನುಭವಿಗಳಿಗೆ ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮದ ಅಡಿ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿತ್ತು. ಆದರೆ, ಲಾಕ್‌ಡೌನ್‌ ಸಡಿಲಿಕೆ ನಂತರ ಹೊರರಾಜ್ಯಗಳಿಂದ ರಾಜ್ಯಕ್ಕೆ ಮರಳಿದವರಿಂದ ಸೋಂಕು ಏರಿಕೆಯಾಯಿತು. ರಾಜ್ಯದ ಎಲ್ಲೆ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸೋಂಕು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿರಿ’ ಎಂದು ತಿಳಿಸಿದರು.

‘ಕುವೆಂಪು ಆಟದ ಮೈದಾನ ಪಕ್ಕದ ಪಾರ್ಕ್ ಬಳಿ ₹ 40 ಲಕ್ಷ ವೆಚ್ಚದಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ’
ಎಂದರು.

ಪಾಲಿಕೆ ಸದಸ್ಯ ಬಂಡೆ ಎಸ್.ರಾಜು ಮಾತನಾಡಿ, ‘ಪದವೀಧರ ವಿದ್ಯಾರ್ಥಿಗಳಿಗೆ 13 ಲ್ಯಾಪ್‌ಟಾಪ್, ರಸ್ತೆಬದಿ ವ್ಯಾಪಾರಿಗಳಿಗೆ 29 ಸೈಕಲ್, ಅಂಗವಿಕಲರಿಗೆ 5 ತ್ರಿಚಕ್ರ ವಾಹನ, ಹೊಲಿಗೆ ತರಬೇತಿ ಪಡೆದಿರುವ ಮಹಿಳೆಯರಿಗೆ 49 ಹೊಲಿಗೆ ಯಂತ್ರ, ವೃತ್ತಿಪರ ಸ್ವಾವಲಂಬನೆಗೆ 7 ಕಾರು ಹಾಗೂ 3 ಆಟೊ ಮತ್ತು ಒಂಟಿ ಮನೆ ಕಾರ್ಯಾದೇಶ ಪತ್ರ ವಿತರಿಸಲಾಗಿದೆ’‌ ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಭುವನೇಶ್ವರಿ ಒಕ್ಕಲಿಗರ ಸಂಘದ ಅಧ್ಯಕ್ಷ ವಿಜಿನಾಪುರ ಪ್ರದೀಪ್ ಗೌಡ, ಮುನೇಗೌಡ, ದುಷ್ಯಂತ್ ರಾಜ್, ಪ್ರಕಾಶ್, ರಮೇಶ್ ಗೌಡ, ನವೀನ್ ಅರಸು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು