ಭಾನುವಾರ, ಜೂನ್ 13, 2021
25 °C
ಕೋವಿಡ್‌ ಪೀಡಿತರಿಗೆ ಸದ್ದಿಲ್ಲದ ದಾಸೋಹ

ಇವರು ಮನೆಮನೆಯ ಫುಡ್‌ ವಾರಿಯರ್ಸ್‌: ಕೋವಿಡ್‌ ಪೀಡಿತರಿಗೆ ಸದ್ದಿಲ್ಲದ ದಾಸೋಹ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಲಾಕ್‌ಡೌನ್‌ ಆರಂಭವಾಗುತ್ತಿದ್ದಂತೆಯೇ ತಮ್ಮೆಲ್ಲ ವ್ಯವಹಾರ ಸ್ಥಗಿತಗೊಳಿಸಿ ಸುಮ್ಮನಿದ್ದವರು ಬಹುತೇಕ ಮಂದಿ. ಆದರೆ, ಇಲ್ಲೊಂದು ದೊಡ್ಡ ತಂಡ ಸದ್ದಿಲ್ಲದೆ ಬೆಂಗಳೂರು ನಗರದಾದ್ಯಂತ ಕೋವಿಡ್‌ ಪೀಡಿತರಿಗೆ ಮನೆ ಆಹಾರ ತಲುಪಿಸುತ್ತಿದೆ.

ಇವರು ‘ಫುಡ್‌ ವಾರಿಯರ್ಸ್‌’

ಇಲ್ಲಿರುವುದು ಸಣ್ಣ ಆಲೋಚನೆ. ಆದರೆ ತಲುಪಿದ್ದು ಮಾತ್ರ ಸಾವಿರಕ್ಕೂ ಮೀರಿದ ಸಂಖ್ಯೆಯ ಕೋವಿಡ್‌ ಸೋಂಕಿತರು.

ಹೊರಮಾವಿನಲ್ಲಿ ತಮ್ಮ ಗೃಹ ಉದ್ಯಮ ‘ದಿ ಸ್ವೀಟ್ ಅಫೇರ್ ಶಾಪ್’ ಹೆಸರಿನಲ್ಲಿ ಬೇಕರಿ ಉತ್ಪನ್ನ ಸಿದ್ಧಪಡಿಸುತ್ತಿರುವ ಸಮಂತಾ ಲಾಸರೋ ಅವರ ತಂಡಕ್ಕೆ ಈ ಆಲೋಚನೆ ಹೊಳೆಯಿತು.

ಕಾರ್ಯಾಚರಣೆ ಹೇಗೆ?

ಪ್ರತಿದಿನ ಮನೆಯಲ್ಲಿ ತಯಾರಿಸುವ ಆಹಾರವನ್ನು ಸ್ವಲ್ಪ ಹೆಚ್ಚಿಗೆ ಸಿದ್ಧಪಡಿಸುವುದು. ಆಯಾ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಆಯಾ ಸಮೀಪದ ಮನೆಯವರು ಹೆಚ್ಚುವರಿ ಆಹಾರ ಸಿದ್ಧಪಡಿಸುತ್ತಾರೆ. ಅವಶ್ಯಕತೆವುಳ್ಳವರು ಕರೆ ಮಾಡಿದಾಗ ‘ಸ್ವಿಗ್ಗಿ’ ಮೂಲಕ ಆಹಾರ ತಲುಪಿಸುತ್ತಾರೆ. ಪ್ರತಿ ಸೋಂಕಿತರು/ ಬಾಧಿತರಿಗೆ ಐದು ದಿನಗಳ ಕಾಲ ಎರಡು ಹೊತ್ತು ಆಹಾರ ಒದಗಿಸುತ್ತಿದೆ ಈ ತಂಡ. ಆಹಾರಕ್ಕೆ ಯಾವುದೇ ಶುಲ್ಕ ಇಲ್ಲ. ಅದನ್ನು ಪೂರೈಸುವ (ಸ್ವಿಗ್ಗಿ) ವೆಚ್ಚವನ್ನು ಫಲಾನುಭವಿಗಳು ಭರಿಸಬಹುದು. ಅದೂ ಅಸಾಧ್ಯವಾದರೆ ಇದೇ ತಂಡ ಅದನ್ನೂ ಭರಿಸುತ್ತಿದೆ.

ನಗರದಾದ್ಯಂತ 40 ಸ್ವಯಂಸೇವಕರ ತಂಡ ಮೇ 2ರಿಂದ ಈ ಕಾಯಕ ಮಾಡುತ್ತಿದೆ.
ಪ್ರತಿ ಸ್ವಯಂಸೇವಕರು
ತಮ್ಮಿಂದಾದಷ್ಟು ಆಹಾರ ತಯಾರಿಸಿ ಪೂರೈಸುತ್ತಿದ್ದಾರೆ. ಹೀಗೆ ಈ ತಂಡದಿಂದ ಪ್ರಯೋಜನ ಪಡೆದವರು 1,500ಕ್ಕೂ ಅಧಿಕ ಮಂದಿ.

ಈ ಸ್ವಯಂಸೇವಕರ ಪಡೆ ಬೆಳೆಯುತ್ತಲೇ ಇದೆ. ಸಾಮಾಜಿಕ ಜಾಲತಾಣಗಳು ಸಹಿತ ಸಾಧ್ಯವಿರುವ ಎಲ್ಲ ಮಾಧ್ಯಮಗಳನ್ನು ಸಂವಹನಕ್ಕಾಗಿ ಈ ತಂಡ ಬಳಸುತ್ತಿದೆ. ಇನ್ನಷ್ಟು ಜನರು ಕೈ ಜೋಡಿಸಬಹುದು. ಹಾಗಾದಾಗ ಸಾಕಷ್ಟು ಅವಶ್ಯಕತೆ ಉಳ್ಳವರಿಗೆ ನಾವು ತಲುಪಿಸಲು ಸಾಧ್ಯ ಎನ್ನುತ್ತಾರೆ ಸಮಂತಾ ಮತ್ತು ಈ ತಂಡದ ಸ್ವಯಂ ಸೇವಕಿ ಅರುಂಧತಿ.

ಸ್ವಯಂ ಸೇವಕರಾಗಲು ಮೊಬೈಲ್‌: 9880945552

ಫೇಸ್‌ಬುಕ್‌: https://www.facebook.com/Food-Warriors- 102650378679374/

ಇನ್‌ಸ್ಟಾಗ್ರಾಂ: http://Www.instagram.com/foodwarriorsblr

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು