ಗುರುವಾರ , ಜನವರಿ 27, 2022
27 °C

ಬೆಂಗಳೂರು: 7 ದಿನಗಳಲ್ಲಿ 19,568 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್ ‍ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ತಿಂಗಳ ಏಳು ದಿನಗಳಲ್ಲಿ 19,568 ಮಂದಿ ಕೊರೊನಾ ಸೋಂಕಿತರಾಗಿರುವುದು ದೃಢಪಟ್ಟಿದೆ. 

ಶುಕ್ರವಾರ 6,812 ಕೋವಿಡ್ ಪ್ರಕರಣಗಳು ಖಚಿತಪಟ್ಟಿವೆ. ಏಳು ತಿಂಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ನಗರದಲ್ಲಿ ಈವರೆಗೆ ವರದಿಯಾದ ಪ್ರಕರಣಗಳ ಒಟ್ಟು ಸಂಖ್ಯೆ 12.83 ಲಕ್ಷ ದಾಟಿದೆ. ಸೋಂಕಿತರಾದವರಲ್ಲಿ ಈವರೆಗೆ 12.41 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸದ್ಯ 25,370 ಸಕ್ರಿಯ ಪ್ರಕರಣಗಳಿವೆ.

ಸೋಂಕಿತರ ಸಂಖ್ಯೆ ಏರಿಕೆ ಕಂಡರೂ ಮರಣ ಪ್ರಮಾಣ ದರ ನಿಯಂತ್ರಣದಲ್ಲಿದೆ. ಏಳು ದಿನಗಳಲ್ಲಿ 17 ಮರಣ ಪ್ರಕರಣಗಳು ದೃಢಪಟ್ಟಿವೆ. 

ಸರ್ಕಾರಿ ಕೋಟಾ: ಹಾಸಿಗೆ ಲಭ್ಯತೆ ವಿವರ (ಜ.07)

ವಿವಿಧ ಮಾದರಿ ಒಟ್ಟು ಹಾಸಿಗೆಗಳು: 1,836

ದಾಖಲಾದವರು: 166

ಬ್ಲಾಕ್ ಮಾಡಲಾಗಿರುವ ಹಾಸಿಗೆಗಳು: 03

ಲಭ್ಯವಿರುವ ವಿವಿಧ ಮಾದರಿ ಒಟ್ಟು ಹಾಸಿಗೆಗಳು: 1,667

ಸಾಮಾನ್ಯ ಹಾಸಿಗೆ ವಿವರ

ಒಟ್ಟು ಸಾಮಾನ್ಯ ಹಾಸಿಗೆಗಳು: 684

ದಾಖಲಾದವರು: 73

ಬ್ಲಾಕ್ ಮಾಡಿರುವ ಹಾಸಿಗೆಗಳು: 02

ಲಭ್ಯವಿರುವ ಹಾಸಿಗೆಗಳು: 609

ಎಚ್‌ಡಿಯು ಹಾಸಿಗೆ ವಿವರ

ಒಟ್ಟು ಎಚ್‌ಡಿಯು ಹಾಸಿಗೆ: 831

ದಾಖಲಾದವರು: 64

ಬ್ಲಾಕ್ ಮಾಡಿರುವ ಹಾಸಿಗೆ: 01

ಲಭ್ಯವಿರುವ ಹಾಸಿಗೆಗಳು: 766

ಐಸಿಯು ಹಾಸಿಗೆ ವಿವರ

ಒಟ್ಟು ಐಸಿಯು ಹಾಸಿಗೆಗಳು: 114

ದಾಖಲಾದವರು: 20

ಬ್ಲಾಕ್ ಮಾಡಿರುವ ಹಾಸಿಗೆ: 00

ಲಭ್ಯವಿರುವ ಒಟ್ಟು ಹಾಸಿಗೆ: 94

ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ ವಿವರ

ಒಟ್ಟು ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ: 207

ದಾಖಲಾದವರು: 09

ಬ್ಲಾಕ್ ಮಾಡಿರುವ ಹಾಸಿಗೆ: 00

ಲಭ್ಯವಿರುವ ಹಾಸಿಗೆ: 198

*ಆಧಾರ: ಬಿಬಿಎಂಪಿ ಹಾಸಿಗೆ ಹಂಚಿಕೆ ಫೋರ್ಟಲ್ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು