ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಪತ್ರ ಬರೆದಿಟ್ಟು ಕುಟುಂಬ ನಾಪತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಗಲಗುಂಟೆ ಠಾಣೆಯ ವ್ಯಾಪ್ತಿಯಲ್ಲಿ ವಾಸವಿದ್ದ ಕುಟುಂಬವೊಂದು ದಿಢೀರ್ ನಾ‍ಪತ್ತೆಯಾಗಿದ್ದು, ಮನೆಯಲ್ಲಿ ಪತ್ರವೊಂದು ಪತ್ತೆಯಾಗಿದೆ.

ಮನೆಯಲ್ಲಿ ಗಾಂಧಿ ಮತ್ತು ಶಾಲಿನಿ ದಂಪತಿ, ಪುತ್ರಿಯರಾದ ಭಾನುಶ್ರೀ ಮತ್ತು ಹೇಮಶ್ರೀ ವಾಸವಿದ್ದರು. ಇದೇ ಕುಟುಂಬದ ಚಿರಂಜೀವಿ ತುಮಕೂರಿನಲ್ಲಿದ್ದರು.

ಪ್ರತಿದಿನವೂ ಮನೆಯವರಿಗೆ ಕರೆ ಮಾಡಿ ಚಿರಂಜೀವಿ ಮಾತನಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕರೆ ಮಾಡಿದಾಗ ಎಲ್ಲರ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಚಿರಂಜೀವಿ ಮನೆಯ ಸಮೀಪದಲ್ಲಿದ್ದ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಚಾರಿಸಿದ್ದರು. ಕುಟುಂಬ ಸದಸ್ಯರು ಮನೆಯಲ್ಲಿ ಇಲ್ಲದಿರುವ ವಿಷಯವನ್ನು ಗೆಳೆಯ ಚಿರಂಜೀವಿ ಗಮನಕ್ಕೆ ತಂದಿದ್ದರು.

ಮನೆಯಲ್ಲಿರುವ ಪ‍ತ್ರದಲ್ಲಿ ‘ನಮಗೆ ಈ ಜೀವನ ಬೇಡ. ದಯವಿಟ್ಟು ನಮ್ಮನ್ನು ಸಾಯಲು ಬಿಡಿ’ ಎಂದು ಬರೆಯಲಾಗಿದೆ. ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.