ಶುಕ್ರವಾರ, ಜೂಲೈ 10, 2020
22 °C

68 ಗ್ರಾಂ ಚಿನ್ನ ಕದ್ದು ಕಾರ್ಮಿಕ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನದಂಗಡಿಯ ಮಾಲೀಕನನ್ನು ವಂಚಿಸಿ 68 ಗ್ರಾಂ ಚಿನ್ನದ ಗಟ್ಟಿ ಸಹಿತ ಅಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪರಾರಿಯಾದ ಘಟನೆ ಅಂಚೆಪೇಟೆ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.

ಅಶೋಕ್ ವೈಷ್ಣವ್ ವಂಚನೆ ಗೊಳಗಾದವರು. ಅವರು ನೀಡಿರುವ ದೂರಿನ ಅನ್ವಯ ಪಶ್ಚಿಮ ಬಂಗಾಳದ ಬಿಸ್ವಾಥ್ ರಾಯ್ (25) ಎಂಬಾತನ ವಿರುದ್ಧ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಂದು ವರ್ಷದಿಂದ ಅಶೋಕ್‌ ಅಂಗಡಿಯಲ್ಲಿ ಬಿಸ್ವಾಥ್ ರಾಯ್ ಚಿನ್ನದ ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದ. ಚಿನ್ನದ ಸರ ಮಾಡಿಕೊಡುವಂತೆ ಅಶೋಕ್‌ ಅವರು ಮೇ 9ರಂದು ಬೆಳಿಗ್ಗೆ 11 ಗಂಟೆಗೆ 68 ಗ್ರಾಂ ಚಿನ್ನದ ಗಟ್ಟಿಯನ್ನು ಬಿಸ್ವಾಥ್‌ಗೆ ನೀಡಿದ್ದರು. ಆದರೆ, 11ರಂದು ಆತ ಸಂಪರ್ಕಕ್ಕೆ ಸಿಗದಿದ್ದಾಗ, ಪರಾರಿಯಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು