ಬೆಂಗಳೂರು: ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸತೀಶ್ (23) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಸ್ನೇಹಿತನೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

‘ಹಳೇ ಬೈಯಪ್ಪನಹಳ್ಳಿಯ ಗಜೇಂದ್ರನಗರ ನಿವಾಸಿ ಸತೀಶ್ (23), ಕಾರ್ಯಕ್ರಮಗಳಲ್ಲಿ ಹೂವಿನ ಅಲಂಕಾರದ ಕೆಲಸ ಮಾಡುತ್ತಿದ್ದರು. ಇವರನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ. ಸ್ನೇಹಿತ ರಾಕೇಶ್ ಎಂಬಾತ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ಥಳೀಯ ನಿವಾಸಿಯಾದ ಆರೋಪಿ ರಾಕೇಶ್ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಈ ವಿಷಯ ಸತೀಶ್ ಅವರಿಗೂ ಗೊತ್ತಿತ್ತು. ರಾಕೇಶ್ ವರ್ತನೆ ಸರಿ ಇಲ್ಲವೆಂಬ ಕಾರಣಕ್ಕೆ ಯುವತಿ ಆತನಿಂದ ದೂರವಾಗಿದ್ದಳು. ಇದೇ ಸಂದರ್ಭದಲ್ಲೇ ಸತೀಶ್, ಯುವತಿ ಜೊತೆ ಒಡನಾಟ ಬೆಳೆಸಿದ್ದರು. ಸತೀಶ್ ಹಾಗೂ ಯುವತಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಇಬ್ಬರೂ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ರಾಕೇಶ್ ಮನೆ ಬಳಿಯೇ ದಂಪತಿ ವಾಸವಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಸಂಚು ರೂಪಿಸಿ ಕೊಲೆ: ‘ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾದನೆಂಬ ಕಾರಣಕ್ಕೆ ಸತೀಶ್ ವಿರುದ್ಧ ರಾಕೇಶ್ ಸಿಟ್ಟಾಗಿದ್ದ. ಆಗಾಗ ಇಬ್ಬರ ನಡುವೆ ಗಲಾಟೆಯೂ ಆಗಿತ್ತು. ಸತೀಶ್ ಅವರನ್ನು ಕೊಲ್ಲಲು ರಾಕೇಶ್ ಸಂಚು ರೂಪಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬೈಯಪ್ಪನಹಳ್ಳಿ ರೈಲು ನಿಲ್ದಾಣ ಸಮೀಪದ ಕೆಳ ಸೇತುವೆ ಬಳಿ ಹೊರಟಿದ್ದ ಸತೀಶ್ ಅವರನ್ನು ಅಡ್ಡಗಟ್ಟಿದ್ದ ಆರೋಪಿ, ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಸತೀಶ್ ಮೃತಪಟ್ಟಿದ್ದಾರೆ. ಕೃತ್ಯದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನವಿದೆ’ ಎಂದು ತಿಳಿಸಿವೆ.

ಜೂಜಾಟ: ಮನೆ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಕೋಣನಕುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.

‘ಕೊತ್ತನೂರು ಮುಖ್ಯರಸ್ತೆಯ ಗೌಡರ ಮುನಿರೆಡ್ಡಿ ಬಡಾವಣೆ ನಿವಾಸಿ ಬಾಬುರೆಡ್ಡಿ ಎಂಬುವರ ಮನೆಯಲ್ಲಿ ಜೂಜಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ. ₹ 50,200 ನಗದು ಜಪ್ತಿ ಮಾಡಲಾಗಿದೆ. ಹಲವು ಬಾರಿ ಆರೋಪಿಗಳು ಮನೆಯಲ್ಲಿ ಸೇರಿ ಹಣ ಕಟ್ಟಿ ಜೂಜು ಆಡುತ್ತಿದ್ದರು. ಇವರೆಲ್ಲರ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.