ಬೆಂಗಳೂರು: ಕೇವಲ ₹ 3 ಸಾವಿರಕ್ಕೆ ನಕಲಿ ಆರ್.ಸಿ (ನೋಂದಣಿ ಪ್ರಮಾಣಪತ್ರ) ಮತ್ತು ₹ 500ರಿಂದ ₹ 1,000ಕ್ಕೆ ವಿಮೆ ಮಾಡಿ ಕೊಡುತ್ತಿದ್ದ ಇಬ್ಬರನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಆರ್‌ಟಿಓ ಕಚೇರಿಯಲ್ಲಿ ಬ್ರೋಕರ್‌ಗಳಾಗಿದ್ದ ಕೆ.ಪಿ. ಅಗ್ರಹಾರದ ಸಂತೋಷ್ (20) ಮತ್ತು ಪೀಣ್ಯ ಬಳಿಯ ಇಂದಿರಾ ಪ್ರಿಯದರ್ಶಿನಿ ನಗರದ ಶ್ರೀಧರ್ (29) ಬಂಧಿತರು. ಸಂತೋಷ್ ಸ್ಮಾರ್ಟ್ ಕಾರ್ಡ್‌ಗಳನ್ನು ಆರ್‌ಟಿಓ ಕಚೇರಿಯಿಂದ ಕಳವು ಮಾಡಿ ಶ್ರೀಧರ್‌ಗೆ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಮುದ್ರಿತವಾಗಿದ್ದ ವಾಹನದ ಮಾಲೀಕರ ಹೆಸರನ್ನು ತಿನ್ನರ್‌ನಿಂದ ಅಳಿಸಿ ಮರು ಮುದ್ರಿಸಿ ನಕಲಿ ಆರ್.ಸಿ ಕಾರ್ಡ್‌ಗಳನ್ನು ಶ್ರೀಧರ್ ಮುದ್ರಿಸುತ್ತಿದ್ದ. ಅದೇ ತಿ ನಕಲಿ ವಿಮೆ ಪತ್ರಗಳನ್ನೂ
ಸೃಷ್ಟಿಸುತ್ತಿದ್ದ.

ಆರೋಪಿಗಳು ಕಾರು ಮತ್ತು ದ್ವಿಚಕ್ರ ವಾಹನಗಳು ಸೇರಿ ಒಟ್ಟು 135 ವಾಹನಗಳಿಗೆ ನಕಲಿ ಆರ್.ಸಿ ಮಾಡಿಕೊಟ್ಟಿರುವುದು ಮತ್ತು 500 ವಾಹನಗಳಿಗೆ ನಕಲಿ ವಿಮೆ ಮಾಡಿಕೊಟ್ಟಿರುವುದು ಪೊಲೀಸ್ ವಿಚಾರಣೆಯಿಂದ ಬಹಿರಂಗಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.