ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಸಿಎಸ್‌ಆರ್‌ ನಿಧಿಯಿಂದ ಕಂಪ್ಯೂಟರ್‌ ಪ್ರಯೋಗಾಲಯ

Published 1 ಫೆಬ್ರುವರಿ 2024, 15:54 IST
Last Updated 1 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ರಾಮಮೂರ್ತಿನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಿಂದ ‘ಕಂಪ್ಯೂಟರ್‌ ಪ್ರಯೋಗಾಲಯ’ ಸ್ಥಾಪಿಸಲಾಗಿದೆ.

ನಮ್ಮ ಬೆಂಗಳೂರು ಫೌಂಡೇಷನ್‌ ಸಹಯೋಗದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್‌ ಬ್ರ್ಯಾಂಡ್‌ ‘ಬೋಟ್‌’,  ‘ಕಂಪ್ಯೂಟರ್‌ ಪ್ರಯೋಗಾಲಯ’ವನ್ನು ಸ್ಥಾಪಿಸಿ, ಅಗತ್ಯವಾದ ಕಂಪ್ಯೂಟರ್‌ ಹಾಗೂ ಸಾಫ್ಟ್‌ವೇರ್‌ಗಳನ್ನು ಒದಗಿಸಿದೆ.

‘ಸರ್ಕಾರಿ ಕಾಲೇಜಿನಲ್ಲಿ ಬಾಲಕಿಯರಿಗೆ ಕಂಪ್ಯೂಟರ್‌ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ಈ ಸಹಯೋಗದಲ್ಲಿ ಪಾಲ್ಗೊಂಡಿದ್ದೇವೆ. ಇನ್ನಷ್ಟು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕಂಪ್ಯೂಟರ್‌ ಪ್ರಯೋಗಾಲಯ ಸ್ಥಾಪಿಸಲಾಗುವುದು’ ಎಂದು ಬೋಟ್‌ ಸಿಇಒ ಸಮೀರ್‌ ಮೆಹ್ತಾ ತಿಳಿಸಿದರು.

‘ರಾಮಮೂರ್ತಿನಗರದ ಕಾಲೇಜಿನಲ್ಲಿ ಮೊದಲ ಪ್ರಯೋಗಾಲಯ ಆರಂಭವಾಗಿದ್ದು 20 ಕಂಪ್ಯೂಟರ್‌, ಸಾಫ್ಟ್‌ವೇರ್‌ ಹಾಗೂ ಪೀಠೋಪಕರಣಗಳನ್ನು ಒದಗಿಸಲಾಗಿದೆ’ ಎಂದು ನಮ್ಮ ಬೆಂಗಳೂರು ಫೌಂಡೇಷನ್‌ ಟ್ರಸ್ಟಿ ಸಂಜಯ್‌ ಕೆ. ಪ್ರಭು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT