ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾರೂಢ ಮಿಷನ್ ಆಶ್ರಮದ ರಜತ ಮಹೋತ್ಸವ

Published 12 ಮೇ 2024, 16:19 IST
Last Updated 12 ಮೇ 2024, 16:19 IST
ಅಕ್ಷರ ಗಾತ್ರ

ಕೆಂಗೇರಿ: ‘ಬದುಕಿನ ಮಗ್ಗುಲನ್ನು ಬದಲಿಸುವ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಜನ ಸಾಮಾನ್ಯರಿಂದ ಸೂಕ್ತ ಸ್ಪಂದನೆ ದೊರಕಬೇಕಿದೆ’ ಎಂದು ರಾಮೋಹಳ್ಳಿ ಸಿದ್ದಾರೂಢ ಮಿಷನ್ ಆಶ್ರಮದ ಆರೂಢಭಾರತಿ ಸ್ವಾಮೀಜಿ ಹೇಳಿದರು.

ಸಿದ್ದಾರೂಢ ಮಿಷನ್ ಆಶ್ರಮದ ರಜತ ಮಹೋತ್ಸವ ಹಾಗೂ ‘ಸಾಂಸ್ಕೃತಿಕ ಭವನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿದ್ದಾರೂಢ ಮಿಷನ್, ಕಳೆದ 25 ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಆ ಮೂಲಕ ಸಮಾಜದಲ್ಲಿ ಏಕತೆ ಹಾಗೂ ಸೌಹಾರ್ದತೆ ತರಲು ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ’ ಎಂದು ಹೇಳಿದರು.

‘ದೈನಂದಿನ ಜಂಜಾಟದ ನಡುವೆಯೂ ಜನರ ಮಾನಸಿಕತೆಯನ್ನು ಸರಿ ದಾರಿಗೆ ತರುವ ಧಾರ್ಮಿಕ ವಿಚಾರಧಾರೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಇದೇ ವೇಳೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ಆಶ್ರಮದ ವತಿಯಿಂದ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT