ಬೆಂಗಳೂರು: ಟೆಲಿಗ್ರಾಂ ಮೆಸೆಂಜರ್ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ನಗರದ ಸಾಫ್ಟ್ವೇರ್ ಎಂಜಿನಿಯರ್ಗೆ ಕಾಲ್ ಗರ್ಲ್ ಹಾಗೂ ಸ್ಪಾ ಸೇವೆ ಒದಗಿಸುವುದಾಗಿ ಹೇಳಿ ₹1.49 ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ನಗರದ ಖಾಸಗಿ ಕಂಪನಿಯ ಉದ್ಯೋಗಿ ಎಂ.ಡಿ.ದಸ್ತಗಿರ್ ಅವರ ದೂರು ಆಧರಿಸಿ, ಇಶಾನಿ ರೆಡ್ಡಿ ಎಂಬವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಸ್ತಗಿರ್ ಅವರು ಟೆಲಿಗ್ರಾಂ ಮೆಸೆಂಜರ್ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ, ಇಶಾನಿ ರೆಡ್ಡಿ ಅವರನ್ನು ಸಂಪರ್ಕಿಸಿದ್ದಾರೆ. ಕಾಲ್ ಗರ್ಲ್ ಹಾಗೂ ಸ್ಪಾ ಸೇವೆ ನೀಡಲಾಗುವುದು. ಇದಕ್ಕೆ ₹299 ಪಾವತಿಸಬೇಕು ಎಂದಿದ್ದಾರೆ. ಬಳಿಕ ಮತ್ತೆ ಹಣ ನೀಡುವಂತೆ ಆರೋಪಿ ಕೇಳಿದ್ದರಿಂದ ಹಂತ ಹಂತವಾಗಿ ₹1.49 ಲಕ್ಷ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಪಾವತಿಸಿದರೂ ಯಾವುದೇ ಸೇವೆ ಒದಗಿಸದ ಕಾರಣ ಹಣವನ್ನು ವಾಪಸ್ ಮಾಡುವಂತೆ ಟೆಕಿ ಕೇಳಿದ್ದಾರೆ. ಆದರೆ ವಾಪಸ್ ನೀಡಲಿಲ್ಲ. ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.