ಸೋಮವಾರ, ಅಕ್ಟೋಬರ್ 14, 2019
22 °C

ಸೈಕಲ್ ರವಿ ಸಹಚರರು ಸಿಸಿಬಿ ಬಲೆಗೆ

Published:
Updated:
Prajavani

ಬೆಂಗಳೂರು: ನಗರದಲ್ಲಿ ದರೋಡೆಗೆ ಸಂಚು ರೂಪಿಸಿದ್ದ ರೌಡಿ ಸೈಕಲ್ ರವಿಯ ಸಹಚರರನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ಗಂಗಾಧರ ಅಲಿಯಾಸ್ ಕರಿ ಗಂಗಾಧರ್, ಶಿವಕುಮಾರ್, ಅರ್ಜುನ್, ಮಂಜುನಾಥ್ ಹಾಗೂ ನರೇಶ್ ಬಂಧಿತರು.

ಅವರಿಂದ ಕಾರು, ತಲಾ ಎರಡು ಲಾಂಗ್, ದೊಣ್ಣೆ ಹಾಗೂ ಕತ್ತಿಯನ್ನು ಜಪ್ತಿ ಮಾಡಲಾಗಿದೆ. ‘ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು, ಹಣಕ್ಕಾಗಿ ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)