ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ ಬಿ.ಎ ಪಠ್ಯದಲ್ಲಿ ‘ದಲಿತ ಸಾಹಿತ್ಯದ ತಾತ್ವಿಕತೆ’ಗೆ ಕೊಕ್‌

Last Updated 24 ಜನವರಿ 2023, 22:16 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ ಪದವಿಯ ಮೂರನೇ ಸೆಮಿಸ್ಟರ್‌ನ ಪಠ್ಯಪುಸ್ತಕದ ನಾಲ್ಕನೇ ಅಧ್ಯಾಯ ‘ದಲಿತ ಸಾಹಿತ್ಯದ ತಾತ್ವಿಕತೆ’ ಪಾಠವನ್ನು ಪಠ್ಯದಿಂದ ತೆಗೆದುಹಾಕಲಾಗಿದೆ.

ಈ ಲೇಖನದಲ್ಲಿ ಕೆಲ ಜಾತಿ ಸೂಚಕ ಆಕ್ಷೇಪಾರ್ಹ ಪದಬಳಕೆ, ಮಾಹಿತಿ ದೋಷ ಇದ್ದವು. ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಬಾರದು ಎನ್ನುವ ಕಾರಣಕ್ಕೆ ಪಠ್ಯದಿಂದ ತೆಗೆಯಲಾಗಿದೆ. ಕನ್ನಡ ಸ್ನಾತಕ ಅಧ್ಯಯನ ಮಂಡಳಿಯ ಸಭೆಯ ತೀರ್ಮಾನ, ಕುಲಪತಿ, ಕುಲಸಚಿವರ ಅನುಮೋದನೆ, ಸಿಂಡಿಕೇಟ್ ಸಭೆಯ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ. ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಪಠ್ಯ ರೂಪಿಸಲು ಅಧ್ಯಯನ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT