‘ಕೆಲವು ಖಾಸಗಿ ಕಂಪನಿಗಳು ರಸ್ತೆ ಅಗೆದು ತಮ್ಮ ಕೇಬಲ್ ಅಳವಡಿಸುವಾಗ ಬೆಸ್ಕಾಂನ ಭೂಗತ ಕೇಬಲ್‌ಗಳಿಗೆ ಹಾನಿ ಮಾಡುತ್ತಿವೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆರ್ಥಿಕ ನಷ್ಟ ಆಗುತ್ತದೆ. ಹೀಗಾಗಿ ಬೆಸ್ಕಾಂ ಕೇಬಲ್ ಇರುವ ಜಾಗವನ್ನು ಗುರುತು ಮಾಡಬೇಕು. ಅದಕ್ಕೆ ಹಾನಿ ಮಾಡುವವರಿಗೆ ಹೆಚ್ಚು ಮೊತ್ತದ ದಂಡ ವಿಧಿಸಲು ನಿಯಮ ರೂಪಿಸಬೇಕು. ತಕ್ಷಣದಿಂದಲೇ ಇದನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
ನಗರದಲ್ಲಿ ವಿದ್ಯುತ್ ಪೂರೈಸುವ ಭೂಗತ ಕೇಬಲ್ ಮತ್ತು ಏರಿಯಲ್ ಬಂಚ್ಡ್ ಕೇಬಲ್ ಅಳವಡಿಕೆ ಕಾರ್ಯ ಶೇ 97ರಷ್ಟು ಆಗಿದ್ದು, ಬಾಕಿ ಕೆಲಸ ತ್ವರಿತಗೊಳಿಸುವಂತೆ ಸೂಚಿಸಿದರು.