ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಪತ್ನಿ, ಪುತ್ರ ಭೇಟಿ: ನಟ ದರ್ಶನ್‌ ಕಣ್ಣೀರು

ಮುಂದಿನ ಕಾನೂನು ಹೋರಾಟ ಕುರಿತು ಚರ್ಚೆ?
Published 25 ಜೂನ್ 2024, 2:26 IST
Last Updated 25 ಜೂನ್ 2024, 2:26 IST
ಅಕ್ಷರ ಗಾತ್ರ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಪುತ್ರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸೋಮವಾರ ಭೇಟಿ ಮಾಡಿದರು.

ಈ ವೇಳೆ ದರ್ಶನ್‌ ಗೆಳೆಯ, ನಟ ವಿನೋದ್‌ ಪ್ರಭಾಕರ್ ಇದ್ದರು. ಮೂವರ ಎದುರು ದರ್ಶನ್‌ ಕಣ್ಣೀರು ಹಾಕಿದ್ದಾರೆ ಎಂದು ಗೊತ್ತಾಗಿದೆ. ಇದೇ ವೇಳೆ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಚರ್ಚಿಸಿದ್ದಾರೆ ಹೇಳಲಾಗಿದೆ.

ಅದಕ್ಕೂ ಮುನ್ನ ಕಾರಾಗೃಹ ಬಳಿಗೆ ಬಂದ ವಿಜಯಲಕ್ಷ್ಮಿ ಮಾಧ್ಯಮದ ವರನ್ನು ಕಂಡು ವಾಪಸು ತೆರಳಿದ್ದರು. ಮತ್ತೆ ಬೇರೊಂದು ಕಾರಿನಲ್ಲಿ ಬಂದ ಅವರನ್ನು ಪೊಲೀಸರು ದರ್ಶನ್ ಭೇಟಿಗೆ ಕರೆ ದೊಯ್ದರು. ಸುಮಾರು ಅರ್ಧ ತಾಸಿನ ಭೇಟಿ ಬಳಿಕ ವಿಜಯಲಕ್ಷ್ಮಿ ಕಾರಾಗೃಹ ದಿಂದ ನಿರ್ಗಮಿಸಿದರು ಎಂದು ಮೂಲಗಳು ಹೇಳಿವೆ. ‘ದರ್ಶನ್ ರನ್ನು ನಾಲ್ಕು ತಿಂಗಳಿಂದ ಭೇಟಿ ಆಗಿರಲಿಲ್ಲ. ಅವರ ಜನ್ಮದಿನದಂದು ಭೇಟಿಯಾಗಿದ್ದೆ’ ಎಂದು ವಿನೋದ್ ಬಳಿಕ ಮಾಧ್ಯಮದವ ರೊಂದಿಗೆ ಮಾತನಾಡುತ್ತಾ ತಿಳಿಸಿದರು.

‘ದರ್ಶನ್ ಅವರು ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾಗ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರನ್ನು ಭೇಟಿ ಮಾಡಿದ್ದೇನೆ. ಹೆಚ್ಚೇನೂ ಮಾತನಾಡಲು ಸಾಧ್ಯವಾಗಲಿಲ್ಲ. ಕೈ ಕುಲುಕಿದ ದರ್ಶನ್ ಸರ್, ನನ್ನನ್ನು ಏನ್‌ ಟೈಗರ್? ಹೇಗಿದ್ದೀಯಾ ಎಂದು ಕೇಳಿದರು’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT