ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬೌದ್ಧಿಕ ಶಕ್ತಿಗೆ ಕನ್ನಡಿಯಾದ ಸ್ಪರ್ಧೆ

ವರ್ಬ್ಯಾಟಲ್ ಚರ್ಚಾ ಸ್ಪರ್ಧೆ ಸಂಪನ್ನ; ಒಟ್ಟು 520 ತಂಡಗಳು ಭಾಗಿ
Last Updated 2 ಆಗಸ್ಟ್ 2019, 18:59 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತದಲ್ಲಿ ಆಂಗ್ಲ ಭಾಷೆ, ವಿಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಸೇರಿದಂತೆ ಹಲವು ಗಂಭೀರ ವಿಷಯಗಳ ಚರ್ಚೆಗೆವರ್ಬ್ಯಾಟಲ್ ಚರ್ಚಾ ಸ್ಪರ್ಧೆಯ ಫೈನಲ್ ಹಣಾಹಣಿ ವೇದಿಕೆಯಾಯಿತು.

ಕಳೆದು ಒಂದು ತಿಂಗಳಿನಿಂದ ನಡೆಯುತ್ತಿದ್ದ ಚರ್ಚಾ ಸ್ಪರ್ಧೆ ಶುಕ್ರವಾರ ಸಂಪನ್ನವಾಯಿತು. ಕನ್ನಡ ವಿಭಾಗದಲ್ಲಿ (12ರಿಂದ 16 ವರ್ಷ) ರಾಜ್ಯದ ವಿವಿಧ ಶಾಲೆಗಳಿಂದ 100ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು.

ಆಂಗ್ಲ ಭಾಷೆಯಲ್ಲಿ ಜೂನಿಯರ್ ವಿಭಾಗದಲ್ಲಿ (12ರಿಂದ 16 ವರ್ಷ) 300 ಹಾಗೂ ಜೂನಿಯರ್ ಪ್ಲಸ್ ವಿಭಾಗದಲ್ಲಿ (16ರಿಂದ 18 ವರ್ಷ) 120 ತಂಡಗಳು ಭಾಗವಹಿಸಿದ್ದವು.

ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಮೈಸೂರು ವಲಯದಲ್ಲಿ ಸ್ಪರ್ಧೆ ನಡೆದಿತ್ತು.ಅಂತಿಮವಾಗಿ ಪ್ರತಿ ವಿಭಾಗದಿಂದ ಮೂರು ತಂಡಗಳು ಫೈನಲ್ ಹಂತವನ್ನು ಪ್ರವೇಶಿಸಿದ್ದವು.

ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಶಿರಸಿ ಚಂದನ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಯರಾದ ಸಿರಿ ಎನ್.ಹೆಗಡೆ, ವೈಷ್ಣವಿ ಆರ್.ಹೆಗಡೆ ವಿಜೇತರಾಗಿ ಹೊರಹೊಮ್ಮಿದರು. ಜೂನಿಯರ್ ಪ್ಲಸ್ ವಿಭಾಗದಲ್ಲಿ ಬೆಂಗಳೂರಿನ ಕೆನ್ಸ್ರಿ ಶಾಲೆಯ ನಿರಂಜನ್, ಶೌನಕ್ ಹಾಗೂ ಜ್ಯೂನಿಯರ್ ವಿಭಾಗದಲ್ಲಿ ಹುಬ್ಬಳ್ಳಿ ಚಿನ್ಮಯ ವಿದ್ಯಾಲಯದ ಕೌಶಲ್, ನೀಲಚಂದನ್ ಪ್ರಥಮ ಸ್ಥಾನ ಪಡೆದರು.

ಜೂನಿಯರ್ ವಿಭಾಗದ ವಿಜೇತರಿಗೆ ₹1 ಲಕ್ಷ ನಗದು, ಕನ್ನಡ ಹಾಗೂ ಜೂನಿಯರ್ ಪ್ಲಸ್‌ ವಿಭಾಗದ ವಿಜೇತರಿಗೆ ತಲಾ ₹20 ಸಾವಿರ ನಗದು ಬಹುಮಾನ ನೀಡಲಾಯಿತು.

ಜೂನಿಯರ್ ವಿಭಾಗದಲ್ಲಿ ಫೈನಲ್‌ನಲ್ಲಿ ಭಾಗವಹಿಸಿದ್ದ ಎರಡು ತಂಡಗಳು ಹಾಗೂ ಮಾರ್ಗದರ್ಶಕರಿಗೆ ತಲಾ ₹20 ಸಾವಿರ ನಗದು ಬಹುಮಾನ ಕೊಡಲಾಯಿತು. ಉಳಿದಂತೆ ಕನ್ನಡ ಹಾಗೂ ಜೂನಿಯರ್ ಪ್ಲಸ್‌ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ತಂಡಗಳಿಗೆ ತಲಾ ₹5 ಸಾವಿರ ನಗದು ಬಹುಮಾನ ವಿತರಿಸಲಾಯಿತು.

ವರ್ಬ್ಯಾಟಲ್ ಸಂಸ್ಥಾಪಕ ದೀಪಕ್ ತಿಮ್ಮಯ ಈ ಸ್ಪರ್ಧೆಯ ವಿನ್ಯಾಸಗಾರರಾಗಿದ್ದಾರೆ. ವಕೀಲ ಬ್ರಿಜೇಶ್ ಕಾಳಪ್ಪ, ಕೇಂದ್ರ ಸರ್ಕಾರದ ಕಂಪ್ಯೂಟರ್ ಶಿಕ್ಷಣದ ಸಲಹೆಗಾರ ಸುಚೀಂದ್ರನಾಥ್ ಅಯ್ಯರ್, ವಕೀಲರಾದ ಸ್ನೇಹ ನಾಗರಾಜ್, ಹೋರಾಟಗಾರ ಟಿ.ಜೆ. ಅಬ್ರಾಹಾಂ, ಉದ್ಯಮಿ ರಾಮಕುಮಾರ್ ಗೋಪಿಶೆಟ್ಟಿ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT