ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್.ನಗರದಲ್ಲಿ ನೇತಾಜಿ ಪ್ರತಿಮೆ ಸ್ಥಾಪನೆಗೆ ನಿರ್ಧಾರ: ಎಂ.ರಾಜ್‌ಕುಮಾರ್‌

Published 25 ಆಗಸ್ಟ್ 2023, 14:15 IST
Last Updated 25 ಆಗಸ್ಟ್ 2023, 14:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜರಾಜೇಶ್ವರಿ ನಗರದಲ್ಲಿ ದೇಶದಲ್ಲೇ ದೊಡ್ಡದಾದ ನೇತಾಜಿ ಅವರ 40 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು’ ಎಂದು ನೇತಾಜಿ ಸುಭಾಷ್‌ ಚಂದ್ರಬೋಸ್ ಸಂಶೋಧನಾ ಹಾಗೂ ಬಹುಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಎಂ.ರಾಜ್‌ಕುಮಾರ್‌ ತಿಳಿಸಿದರು.

ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

‘ನಗರದ ಸಮೀಪ ವಿಶ್ವವಿದ್ಯಾಲಯದ ಸ್ಥಾಪನೆಗೆ ನೀಲನಕ್ಷೆ ಸಿದ್ಧಗೊಂಡಿಗದೆ. ಈ ಕ್ಯಾಂಪಸ್‌ನಲ್ಲಿ ಎಲ್‌.ಕೆ.ಜಿಯಿಂದ ಪಿ.ಜಿ. ತನಕ ಬೋಧನೆಯ ಸುಸಜ್ಜಿತ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗುತ್ತಿದೆ. ನೇತಾಜಿ ಅವರ ಕುರಿತಾದ ಜ್ಞಾನಾರ್ಜನೆಯ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮಲಿದೆ’ ಎಂದು ತಿಳಿಸಿದರು. ‌

‘ಸುಭಾಷ್‌ ಚಂದ್ರ ಬೋಸ್‌ ಅವರ ತತ್ವ–ಆದರ್ಶಗಳು ಜನರ ನರ ನಾಡಿಗಳಲ್ಲಿ ಹರಿಯಬೇಕೆಂಬ ಸಂಕಲ್ಪದಲ್ಲಿ ಟ್ರಸ್ಟ್‌ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಪುಸ್ತಕ ಪ್ರಕಟಣೆ, ಗ್ರಂಥಾಲಯ ಸ್ಥಾಪನೆ, ನೇತಾಜಿ ಜೀವನವನ್ನು ಯುವಜನರಿಗೆ ಪರಿಚಯಿಸುವ ಹಲವಾರು ಕಾರ್ಯಕ್ರಮಗಳನ್ನು ನೇತಾಜಿ ಭವನದ ಮೂಲಕ ರೂಪಿಸಲಾಗಿದೆ ಎಂದು ಹೇಳಿದರು.

ಟ್ರಸ್ಟ್‌ನ ಪದಾಧಿಕಾರಿಗಳು: ಜಿ.ಆರ್.ಶಿವಶಂಕರ್ (ಪ್ರಧಾನ ಕಾರ್ಯದರ್ಶಿ), ರಾಜಯೋಗೀಂದ್ರ ವೀರಯ್ಯ ಸ್ವಾಮಿ ಶಾಸ್ತ್ರಿಮಠ ಗುರೂಜಿ (ಸಂಸ್ಥಾಪಕ ಟ್ರಸ್ಟಿ), ಗುರು ಶಾಸ್ತ್ರಿಮಠ ಹಾಗೂ ಸಂಜಯ್‌ ಡಿ. ಕಲ್ಮಣ್ಕರ್‌ (ಉಪಾಧ್ಯಕ್ಷರು), ಉಮಾ ಶೇಷಗಿರಿ (ಕಾರ್ಯದರ್ಶಿ), ಅಮರನಾಥ ಕೋಟಿ (ಖಜಾಂಚಿ), ರವೀಂದ್ರ ನಾರಾಯಣ ಜೋಷಿ, ಆರ್‌.ವಿಶಾಲ್‌, ಸ್ಮರಣ್‌ ಶಿವಶಂಕರ್‌, ರಾಹುಲ್ ಶೇಷಗಿರಿ, ಆದಿತ್ಯ ಸಂಜಯ್‌ ಕಲ್ಮಣ್ಕರ್ (ಟ್ರಸ್ಟಿಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT