ಸೋಮವಾರ, ಜೂನ್ 21, 2021
27 °C

ನಿಷ್ಕ್ರಿಯ ಆಸ್ಪತ್ರೆಗೆ ಮರುಜೀವ, ಡಿಕೆ ಸುರೇಶ್‌ಗೆ ಥ್ಯಾಂಕ್ಸ್ ಹೇಳಿದ ತೇಜಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಲ್ಸನ್ ಗಾರ್ಡನ್‌ನಲ್ಲಿ ನೆನೆಗುದಿಗೆ ಬಿದ್ದಿದ್ದ ಆಸ್ಪತ್ರೆಯನ್ನು ಪುನಃ ಕಾರ್ಯಾಚರಿಸಲು ಸಂಸದ ತೇಜಸ್ವಿ ಸೂರ್ಯ ಮಾಡಿರುವ ಪ್ರಯತ್ನಕ್ಕೆ ಯಶ ಲಭಿಸಿದೆ. ಈ ಸಂದರ್ಭದಲ್ಲಿ ಇವರಿಗೆ ನೆರವಾಗಿರುವ ಸಂಸದ ಡಿ.ಕೆ. ಸುರೇಶ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 

ಕಳೆದ ಏಳು ವರ್ಷಗಳಿಂದಲೂ ನಿಷ್ಕ್ರಿಯವಾಗಿದ್ದ ಮಹಾಬೋಧಿ ಆಸ್ಪತ್ರೆಯನ್ನು ಸುಸಜ್ಜಿತವಾಗಿ ಪುನರಾರಂಭಿಸಲು ಯಶಸ್ವಿಯಾಗಿದ್ದಾರೆ. 

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಕೋವಿಡ್-19 ಸಾಂಕ್ರಾಮಿಕ ರೋಗದ ಕಠಿಣ ಸಮಯದಲ್ಲಿ ಒಂದಾಗಿ ಕೆಲಸ ನಿರ್ವಹಿಸುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಸಂಸದರು ಮಾದರಿಯಾಗಿದ್ದಾರೆ. 

ವಿಲ್ಸನ್ ಗಾರ್ಡನ್‌ನಲ್ಲಿರುವ ಮಹಾಬೋಧಿ ಆಸ್ಪತ್ರೆ ಇದೀಗ 50 ಹಾಸಿಗೆಗಳ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ 10 ಐಸಿಯು ಹಾಗೂ 40 ಬೆಡ್‌ಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಕುರಿತು ವಿಡಿಯೊ ಸಂದೇಶದಲ್ಲಿ ಡಿ.ಕೆ.ಸುರೇಶ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಪ್ರತಿ ದಿವಸ ಆಸ್ಪತ್ರೆಗಳ ಬೆಡ್ ಜಾಸ್ತಿ ಮಾಡಬೇಕು. ಐಸಿಯು ಸಂಖ್ಯೆ ಜಾಸ್ತಿಯಾಗಬೇಕು ಅನ್ನೋ ಬೇಡಿಕೆ ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿದೆ. ಇರುವಂತಹ ಆಸ್ಪತ್ರೆಗಳ ಜೊತೆಗೆ ಇಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು ನಿಷ್ಕ್ರಿಯ ಆಸ್ಪತ್ರೆಗಳಿದ್ದು, ಕಾರ್ಯಾಚರಣೆ ನಡೆಯುತ್ತಿರಲಿಲ್ಲ. 

10 ದಿನಗಳ ಹಿಂದೆ ಮಹಾಬೋಧಿ ಆಸ್ಪತ್ರೆಯನ್ನು ಮತ್ತೆ ಶುರು ಮಾಡಬೇಕೆಂಬ ಪ್ರಯತ್ನ ಮಾಡಿದ್ದೇವೆ. ಕಳೆದ 10 ದಿನಗಳಿಂದ ಸತತ ಪ್ರಯತ್ನ ಮಾಡಿ ಬಿಬಿಎಂಪಿಯ ಅಧಿಕಾರಿಗಳು, ಬೇರೆ ಬೇರೆ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು, ಎನ್‌ಜಿಒ ಸೇರಿದಂತೆ ಎಲ್ಲರ ಸಹಕಾರ ತೆಗೆದುಕೊಂಡು ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಹಾಕಿ ಶುರು ಮಾಡಿದ್ದೇವೆ. 

ಇನ್ನು ಒಂದೆರಡು ದಿನಗಳಲ್ಲಿ ಆಪರೇಷನ್ ಸಹ ಪ್ರಾರಂಭವಾಗಲಿದೆ. ಐಸಿಯು ಬೆಡ್ ಕೂಡಾ ಆಸ್ಪತ್ರೆಯಲ್ಲಿ ಲಭ್ಯವಿದ್ದು, ತಕ್ಷಣದಲ್ಲಿ 50 ರೋಗಿಗಳಿಗೆ ನೆರವು ಸಿಗಲಿದೆ. ಈ ಒಂದು ಪ್ರಯತ್ನದಲ್ಲಿ ನಮಗೆ ಡಿ.ಕೆ ಸುರೇಶ್ ಅವರು ಸಹ ಸಹಕಾರ ಕೊಟ್ಟಿದ್ದಾರೆ. ಅವರಿಗೂ ಈ ಸಂದರ್ಭದಲ್ಲಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು