ಬೆಂಗಳೂರು: ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ₹ 200 ಕೋಟಿ ಮೀಸಲಿಡಬೇಕು ಎಂದು ‘ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ’ಯ ಪದಾಧಿಕಾರಿಗಳು ಆಗ್ರಹಿಸಿದರು.

ಚಳವಳಿ ರಾಜ್ಯ ಸಮಿತಿ ಸದಸ್ಯರಾದ ಕೃತಿಕಾ, ನಿಶಾ ಗುಳೂರ್, ಆಕಾಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಕಳೆದ ಚುನಾವಣೆಯ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ₹ 200 ಕೋಟಿ ಮೀಸಲಿಡುವುದಾಗಿ ಘೋಷಣೆ ಮಾಡಿತ್ತು. ಆದರೆ, ವಾಗ್ದಾನ ಇನ್ನೂ ನೆರವೇರಿಸಿಲ್ಲ. ಈ ಬಾರಿ ಬಜೆಟ್ನಲ್ಲಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಈ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು. ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ₹ 250 ಕೋಟಿ ಒದಗಿಸಬೇಕು. ವಸತಿ, ವಸತಿನಿಲಯ, ತಾತ್ಕಾಲಿಕ ಸ್ಟೇಹೋಮ್ಗಳನ್ನು ಒದಗಿಸಬೇಕು. ಪ್ರತಿ ವರ್ಷ ಕನಿಷ್ಠ 500 ಮನೆ ಹಂಚಿಕೆ ಮಾಡಬೇಕು’ ಎಂದು ಹೇಳಿದರು.

‘ಕೃಷಿ ಆಸಕ್ತ ಪ್ರತಿಯೊಬ್ಬರಿಗೆ ಎರಡು ಎಕರೆ ಭೂಮಿ ಒದಗಿಸಬೇಕು. ಗೋಮಾಳ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು. ಉದ್ಯಮಶೀಲವನ್ನು ಪ್ರೋತ್ಸಾಹಿಸಲು ಬ್ಯಾಂಕ್ ಲಿಂಕ್ ಆಧಾರಿತ ಯೋಜನೆ ಜಾರಿಗೊಳಿಸಿ ಪ್ರತಿ ವ್ಯಕ್ತಿಗೆ ₹ 2 ಲಕ್ಷ ಸಬ್ಸಿಡಿ ನೀಡಬೇಕು. ಸ್ವಸಹಾಯ ಗುಂಪುಗಳನ್ನು ರಚಿಸಲು ಅನುದಾನ ನೀಡಬೇಕು. ಬಡ್ಡಿರಹಿತ ಸಾಲ ಒದಗಿಸಬೇಕು. ಮೈತ್ರಿ ಪಿಂಚಣಿಯನ್ನು ₹ 2 ಸಾವಿರಕ್ಕೆ ಹೆಚ್ಚಿಸಬೇಕು. ವೃದ್ಧಾಪ್ಯ ಪಿಂಚಣಿ ₹ 5 ಸಾವಿರ ನೀಡಬೇಕು. ಸರ್ಕಾರಿ ಉದ್ಯೋಗ, ಸ್ಫರ್ಧಾತ್ಮಕ ಪರಿಕ್ಷಾ ತರಬೇತಿ, ಕೋಚಿಂಗ್ಗಳಲ್ಲಿ ಶೇ 1 ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.