ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಸ್ಥಗಿತಗೊಳಿಸಲು ಆಗ್ರಹ

Published 20 ಆಗಸ್ಟ್ 2024, 16:43 IST
Last Updated 20 ಆಗಸ್ಟ್ 2024, 16:43 IST
ಅಕ್ಷರ ಗಾತ್ರ

ಬೆಂಗಳೂರು: ‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾದಿತಪ್ಪಿರುವ ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು’ ಎಂದು ಆ್ಯಕ್ಷನ್‌ ಫಾರ್‌ ಅನಿಮಲ್‌ ಜಸ್ಟೀಸ್‌ನ (ಎಎಫ್‌ಎಜೆ) ಸದಸ್ಯರು ಆಗ್ರಹಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿರುವ ಎಎಫ್‌ಎಜೆ ಸದಸ್ಯರು, ‘ಭಾರತೀಯ ಪಶು ಕಲ್ಯಾಣ ಮಂಡಳಿಯ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಹಲವು ಅಧಿಕಾರಿಗಳು ದಶಕದಿಂದ ಎಬಿಸಿ ಕಾರ್ಯಕ್ರಮದಲ್ಲೇ ಇದ್ದಾರೆ.  ಪ್ರತಿವರ್ಷ ಇಲ್ಲೇ ಉಳಿದುಕೊಳ್ಳಲು ಪ್ರಭಾವ ಬಳಸುತ್ತಿದ್ದಾರೆ. ಇದರಿಂದ ಎಬಿಸಿ ಕಾರ್ಯಕ್ರಮ ಹಾದಿತಪ್ಪಿದೆ. ಬೀದಿ ನಾಯಿಗಳು ಅನಾರೋಗ್ಯಕ್ಕೆ ತುತ್ತಾಗಿ ಸಾಯುತ್ತಿವೆ’ ಎಂದು ದೂರಿದರು.

‘ಕಾನೂನುಬಾಹಿರವಾಗಿ ಎಬಿಸಿ ಕಾರ್ಯಕ್ರಮಕ್ಕೆ ಸರ್ಕಾರೇತರ ಸಂಸ್ಥೆಗಳನ್ನು (ಎನ್‌ಜಿಒ) ನೇಮಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದಿರುವ ಅಧಿಕಾರಿಗಳನ್ನು ಪಶುವೈದ್ಯ ಇಲಾಖೆಗೆ ವಾಪಸ್‌ ಕಳುಹಿಸಬೇಕು. ಎಬಿಸಿ ಕಾರ್ಯಕ್ರಮದಲ್ಲಾಗಿರುವ ಲೋಪಗಳ ಕುರಿತು ತನಿಖೆ ನಡೆಸಿ, ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಎಎಫ್‌ಎಜೆ ಸದಸ್ಯರಾದ ಅರುಣ್‌ ಪ್ರಸಾದ್‌, ಸುಜಯಾ ಜಗದೀಶ್‌, ಡಾ. ಮಿಟ್ಟೂರು ಎನ್‌. ಜಗದೀಶ್‌, ರವಿ ನಾರಾಯಣ್‌, ನೆವಿನಾ ಕಮತಿ, ಸುಜಾತಾ ಪ್ರಸನ್ನ, ವರುಣ ವರ್ಮಾ, ಸರೋಜಾ ದಿಲೀಪನ್‌, ರಿಚಾ ಜಟಾಲೆ, ಸ್ಮಿತಾ  ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT