ಬುಧವಾರ, ಮೇ 18, 2022
25 °C

ಧರಂಪಾಲ್ ಜನ್ಮಶತಾಬ್ದಿ: 5 ಪುಸ್ತಕಗಳ ಬಿಡುಗಡೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಾಂಧಿವಾದಿ ಧರಂಪಾಲ್ ಜನ್ಮಶತಾಬ್ದಿ ವರ್ಷದ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ 5 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ (ಫೆ.19) ಸಂಜೆ 6 ಗಂಟೆಗೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಈ ವರ್ಷ ಧರಂಪಾಲ್ ಅವರ ಸಾಹಿತ್ಯವನ್ನು ಜನರಿಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ‘ಧರಂಪಾಲ್ ಕ್ಲಾಸಿಕ್  ಸಿರೀಸ್’ ಮೂಲಕ ಅವರ ಸಾಹಿತ್ಯವನ್ನು ಪಸರಿಸಲಾಗುತ್ತಿದೆ. ಈ ಸರಣಿಯ ಹತ್ತು ಪುಸ್ತಕಗಳಲ್ಲಿ ‘ಪಂಚಾಯತ್ ರಾಜ್ ಆ್ಯಸ್ ದಿ ಬೇಸಿಸ್ ಆಫ್ ಇಂಡಿಯನ್ ಪಾಲಿಟಿ’, ‘ಇಂಡಿಯನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇನ್ ದಿ ಎಯಿಟಿಂತ್‌ ಸೆಂಚುರಿ’, ‘ಸಿವಿಲ್ ಡಿಸ್‌ಒಬಿಡಿಯನ್ಸ್ ಆ್ಯಂಡ್ ಇಂಡಿಯನ್ ಟ್ರೆಡಿಷನ್ಸ್’, ‘ದಿ ಬ್ಯುಟಿಫುಲ್ ಟ್ರೀ’ ಹಾಗೂ ‘ಭಾರತೀಯ ಚಿತ್ತ ಮಾನಸ್ ಆ್ಯಂಡ್ ಕಲಾ’ ಕೃತಿ ಬಿಡುಗಡೆಯಾಗಲಿದೆ ಎಂದು ಪರಿಷತ್ ತಿಳಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಸುರೇಶ್ ಸೋನಿ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ.ಕೆ. ವಿಜಯರಾಘವನ್, ಜಲಗಾಂವ್‌ನ ಗಾಂಧಿ ಸಂಶೋಧನಾ ‍ಪ್ರತಿಷ್ಠಾನದ ಡಾ. ಗೀತಾ ಧರಂಪಾಲ್ ಹಾಗೂ ಧರಂಪಾಲ್ ಕ್ಲಾಸಿಕ್ ಸೀರಿಸ್‌ನ ಸಂಪಾದಕ ಡಾ.ಜೆ.ಕೆ. ಬಜಾಜ್ ಹಾಗೂ ಡಾ.ಎಂ.ಡಿ. ಶ್ರೀನಿವಾಸ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.