ಚಿಕಿತ್ಸೆಗೆ ₹ 169 ಕೋಟಿ ವೆಚ್ಚ
‘ಈಗಾಗಲೆ ಜಾರಿಯಲ್ಲಿರುವ ಎಬಿ–ಪಿಎಂಜೆಎವೈ ಅಡಿ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬದ 70 ವರ್ಷ ಮೇಲ್ಪಟ್ಟ ಸದಸ್ಯರಿಗೆ 2023–24ನೇ ಸಾಲಿನಲ್ಲಿ ಒಟ್ಟು ₹ 169 ಕೋಟಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ’ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ‘ಯೋಜನೆಗೆ ಸಂಬಂಧಿಸಿದಂತೆ ಹೆಸರು ಕೇಂದ್ರ ಸರ್ಕಾರದ್ದು ಹಣ ರಾಜ್ಯ ಸರ್ಕಾರದ್ದು ಆಗಬಾರದು. ಯೋಜನೆಯಡಿ ಚಿಕಿತ್ಸೆಗೆ ಸಂಬಂಧಿಸಿದಂತೆ 70 ವರ್ಷ ಮೇಲ್ಪಟ್ಟವರು ಯಾವುದೇ ಕಾರ್ಡ್‌ಗಳನ್ನು ಹೊಸದಾಗಿ ಪಡೆಯಬೇಕಿರುವುದಿಲ್ಲ. ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಇದ್ದರೆ ಸಾಕಾಗುತ್ತದೆ’ ಎಂದು ಹೇಳಿದರು.