ಬೆಂಗಳೂರು: ಅಪಾರ್ಟ್ಮೆಂಟ್ನಲ್ಲಿರುವ ಫ್ಲಾಟ್ಗೆ ಸೌರವಿದ್ಯುತ್ ಅಳವಡಿಸಿಕೊಳ್ಳಬೇಕು. ಆದರೆ, ಚಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಲು ಸಾಕಷ್ಟು ಜಾಗವಿಲ್ಲ, ಏನ್ಮಾಡೋದು?

ಚಿಂತಿಸಬೇಡಿ. ಇನ್ನು ಮುಂದೆ ಚಾವಣಿಯಷ್ಟೇ ಅಲ್ಲ, ಮನೆಯ ಅಂಗಳ, ಕಾರು ಪಾರ್ಕಿಂಗ್ ತಾಣ, ಗೋಡೆಗಳು ಅಷ್ಟೇ ಅಲ್ಲದೇ ಚಾವಣಿ ಲಭ್ಯವಿರುವ ಬೇರೆ ಕಟ್ಟಡಗಳ ಮೇಲೂ ಸೌರಫಲಕಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದಿಸಬಹುದು(ನೆಲದ ಮೇಲಾದರೆ, ನೆಲದಿಂದ 8 ಅಡಿ ಎತ್ತರದಲ್ಲಿ ಫಲಕ ಅಳವಡಿಸಬೇಕು). ಗ್ರಾಹಕರು ವಿದ್ಯುತ್ ಅನ್ನು ಬಳಸಿ, ಉಳಿದರೆ ಗ್ರಿಡ್ಗೆ ಮಾರಾಟ ಮಾಡಬಹುದು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್ಸಿ) ಇಂಥದ್ದೊಂದು ಅವಕಾಶವನ್ನು ಕಲ್ಪಿಸಿ, ಜುಲೈ 9ರಂದು ಆದೇಶ ಹೊರಡಿಸಿದೆ. ಇದಕ್ಕಾಗಿ ಹಿಂದೆ ಇದ್ದ ಚಾವಣಿ ಸೌರ ವಿದ್ಯುತ್ ಯೋಜನೆಯ (ಎಸ್ಆರ್ಟಿಪಿವಿ) ನಿಯಮಗಳನ್ನು ಪರಿಷ್ಕರಿಸಿ, ಡಿಸ್ಟ್ರಿಬ್ಯೂಟೆಡ್ ಸೋಲಾರ್ ಫೊಟೊವೊಲ್ಟಾಯಿಕ್ (ಡಿಎಸ್ಪಿವಿ) ಎಂದು ಮರು ನಾಮಕರಣ ಮಾಡಿದೆ.

ಎಸ್ಆರ್ಟಿಪಿವಿ ಯೋಜನೆಯ ಅನ್ವಯ ಎಲ್ಲಿ ಸೌರವಿದ್ಯುತ್ ಬಳಸುತ್ತೀರೊ, ಅಲ್ಲಿಯೇ ಸೌರಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಬೇಕಿತ್ತು. ಆದರೆ, ಡಿಎಸ್ಪಿವಿ ಯೋಜನೆಗಳಲ್ಲಿ ವರ್ಚುವಲ್ ನೆಟ್ ಮೀಟರಿಂಗ್ (VNM) ಮತ್ತು ಗ್ರೂಪ್ ನೆಟ್ ಮೀಟರಿಂಗ್ (GNM) ವ್ಯವಸ್ಥೆಯನ್ನು ಆಯೋಗ ಅನುಮತಿಸಿದ್ದು, ಚಾವಣಿಯಲ್ಲದೇ ಬೇರೆ ಕಡೆಯೂ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸಬಹುದು.

ವಿಎನ್ಎಂ ಅಡಿಯಲ್ಲಿ ಒಬ್ಬರಿಗಿಂತ ಹೆಚ್ಚು ಗ್ರಾಹಕರು ತಮ್ಮ ಎಸ್ಕಾಂ ವ್ಯಾಪ್ತಿಯಲ್ಲಿ ಲಭ್ಯವಿರುವ ಜಾಗದಲ್ಲಿ ಸೌರಫಲಕಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದಿಸಬಹುದು. ಅಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಪೂರ್ಣ ಪ್ರಮಾಣದಲ್ಲಿ ಗ್ರಿಡ್ಗೆ ಕೊಡಬೇಕು. ಉತ್ಪಾದಿತ ವಿದ್ಯುತ್ನಿಂದ ಗ್ರಾಹಕರು ತಮ್ಮ ಮನೆಗಳಲ್ಲಿ ಬಳಸಿದ ವಿದ್ಯುತ್ಗೆ ಹೊಂದಾಣಿಕೆ ಮಾಡುತ್ತಾರೆ. ಇದರಲ್ಲಿ ಹೆಚ್ಚುವರಿ ವಿದ್ಯುತ್ ಉಳಿದಿದ್ದರೆ, ಅದಕ್ಕೆ ಬೆಸ್ಕಾಂ ಹಣ ನೀಡುತ್ತದೆ. ಈ ಯೋಜನೆಗೆ ಸೇರುವ ಮುನ್ನ ಗ್ರಾಹಕರು ಉತ್ಪಾದಿತ ವಿದ್ಯುತ್ ಎಷ್ಟು ಶೇಕಡಾವಾರು ಹಂಚಿಕೆಯಾಗಬೇಕು ಎಂದು ಒಪ್ಪಂದ ಮಾಡಿಕೊಂಡು, ಅದನ್ನು ಬೆಸ್ಕಾಂಗೆ ಸಲ್ಲಿಸಿರಬೇಕು. ಆ ಪ್ರಕಾರ ಬೆಸ್ಕಾಂನವರು ಉತ್ಪಾದನೆಯಾದ ವಿದ್ಯುತ್ ಅನ್ನು ಗ್ರಾಹಕರ ಮನೆಯ ವಿದ್ಯುತ್ ಬಿಲ್ಗಳಿಗೆ ಹೊಂದಾಣಿಕೆ ಮಾಡುತ್ತಾರೆ.

ಈ ವಿಎನ್ಎಂ ಸೌಲಭ್ಯ, ಎಸ್ಕಾಂ ವ್ಯಾಪ್ತಿಯ ಗೃಹ ಬಳಕೆದಾರರು, ಹೌಸಿಂಗ್ ಸೊಸೈಟಿಗಳ ಸಮೂಹ, ಚಾರಿಟಬಲ್ ಟ್ರಸ್ಟ್ಗಳು ನಡೆಸುವ ಸಂಸ್ಥೆಗಳು, ಸರ್ಕಾರಿ ಶಾಲೆಗಳು, ಸ್ಥಳೀಯ ಸಂಸ್ಥೆಗಳ ಕಟ್ಟಡಗಳು, ಸರ್ಕಾರಿ ಕಟ್ಟಡಗಳಷ್ಟೇ ಅರ್ಹವಾಗಿರುತ್ತವೆ.

ಯಾರಿಗೆಲ್ಲ ಅನುಕೂಲ?

ಸೌರಫಲಕಗಳನ್ನು ಅಳವಡಿಸಲು ಪೂರಕವಾದ ಚಾವಣಿ ಇಲ್ಲದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಣ್ಣ ಅಳತೆಯ ನಿವೇಶನದಲ್ಲಿ ಕಟ್ಟಿದ ಮನೆಗಳ ಚಾವಣಿಯಲ್ಲಿ ಸೌರಫಲಕ ಅಳವಡಿಕೆಗೆ ಜಾಗದ ಕೊರತೆ ಇರುತ್ತದೆ. ಆದರೆ ಮನೆ ಹಿಂದೆ ಅಥವಾ ಮುಂದೆ ಜಾಗವಿರುತ್ತದೆ. ಇಂಥ ನಿವಾಸಿಗಳಿಗೆ ಈ ಆದೇಶದಿಂದ ಅನುಕೂಲವಾಗಲಿದೆ. ಚಾವಣಿ ಇದ್ದೂ ಬಿಸಿಲಿನ ಅಭಾವವಿರುವವರಿಗೆ ಇದರಿಂದ ಅನುಕೂಲವಾಗುತ್ತದೆ. 'ಅಪಾರ್ಟ್ಮೆಂಟ್ನಲ್ಲಿರುವ ಕಾರ್, ಸೈಕಲ್ ಪಾರ್ಕಿಂಗ್ನಂತಹ ತಾಣಗಳಲ್ಲಿ ಸೌರಫಲಕ ಅಳವಡಿಸಿಕೊಂಡರೆ, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್, ಕಾಮನ್ ಏರಿಯಾದಲ್ಲಿನ ವಿದ್ಯುತ್ ಬಳಕೆಗೂ ಅನುಕೂಲವಾಗುತ್ತದೆ’ ಎಂಬುದು ತಜ್ಞರ ವಿಶ್ಲೇಷಣೆ.

ನೆಲದ ಮೇಲೂ ಸೌರಫಲಕ ಅಳವಡಿಸಲು ಅನುಮತಿ ನೀಡಿರುವುದರಿಂದ ಸೌರವಿದ್ಯುತ್ ಉತ್ಪಾದನೆ ಹೆಚ್ಚಾಗಲು ಸಹಾಯವಾಗುತ್ತದೆ. ಇದರಿಂದ ಎಸ್ಕಾಂ ಪೂರೈಸುವ ವಿದ್ಯುತ್ ಮೇಲಿನ ಅವಲಂಬನೆ ತಗ್ಗುತ್ತದೆ. ಇದು ಪರೋಕ್ಷವಾಗಿ ಇಂಧನ ಕ್ಷೇತ್ರಕ್ಕೆ ಸಹಕಾರಿಯಾಗುತ್ತದೆ
ಬೆಸ್ಕಾಂ ಅಧಿಕಾರಿಗಳು

- ‘ಜಿಎನ್ಎಂ’ ಎಂದರೆ

ಒಬ್ಬ ಗ್ರಾಹಕರಿಗೆ ಬೇರೆ ಬೇರೆ ಕಡೆ ಎರಡು–ಮೂರು ಮನೆಗಳಿರುತ್ತವೆ. ಒಂದು ಮನೆಯಲ್ಲಿ ಮಾತ್ರ ಸೌರಫಲಕ ಅಳವಡಿಕೆಗೆ ಅವಕಾಶವಿರುತ್ತದೆ. ಇಂಥ ವೇಳೆ ಒಂದು ಮನೆಗೆ ಸೌರಫಲಕ ಅಳವಡಿಸಿ ವಿದ್ಯುತ್ ತಯಾರಿಸಿ ಅದನ್ನು ಮೂರು ಮನೆಗೂ ಹಂಚಿಕೆ ಮಾಡಬಹುದು. ಇದಕ್ಕೆ ಗ್ರೂಪ್ ನೆಟ್ ಮೀಟರಿಂಗ್(ಜಿಎನ್ಎಂ)’ ಎನ್ನುತ್ತಾರೆ. ಡಿಎಸ್ಪಿವಿ ಯೋಜನೆಯಲ್ಲಿ ಈ ಸೌಲಭ್ಯಕ್ಕೂ ಕೆಇಆರ್ಸಿ ಅವಕಾಶ ಕಲ್ಪಿಸಿದೆ. ವಿಎನ್ಎಂ ಮತ್ತು ಜಿಎನ್ಎಂ ಸೌಲಭ್ಯಗಳಡಿ ಗ್ರಾಹಕರು ಉತ್ಪಾದಿಸುವ ವಿದ್ಯುತ್ ಅನ್ನು ಗ್ರಿಡ್ಗೆ ಕಳಿಸಲು ಇಚ್ಛಿಸಿದರೆ ಅಂಥವರು ಕನಿಷ್ಠ 5 ಕಿಲೋವಾಟ್ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಿರಬೇಕು ಎಂದು ಆಯೋಗ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.