ಸಂಘದ ಶಕ್ತಿ ವೃದ್ಧಿ
ಆರ್‌ಎಸ್‌ಎಸ್ ಕಡೆಗೆ ಯುವಜನರು ಆಕರ್ಷಿತರಾಗಿದ್ದು, ಸಂಘದ ಶಕ್ತಿ ವರ್ಧನೆ
ಯಾಗುತ್ತಿದೆ. ಸ್ವಯಂ ಸೇವಕರ ಸಂಖ್ಯೆ ಒಂದು ಕೋಟಿ ದಾಟಿದೆ ಎಂದು ಸಂಘ ಹೇಳಿದೆ.
‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಂಡಿಸಿದ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
14-25 ವರ್ಷ ವಯಸ್ಸಿನವರು ಸ್ವಯಂಸೇವಕ ರಾಗಿ ಸೇರುತ್ತಿದ್ದಾರೆ. ಈ ವರ್ಷ 4,415 ಪ್ರಾರಂಭಿಕ ಶಿಕ್ಷಾ ವರ್ಗಗಳು (ಆರಂಭಿಕ ತರಬೇತಿ ಶಿಬಿರ) ನಡೆದವು. 2,22,962 ಮಂದಿ ಹಾಜರಾಗಿದ್ದು ಅವರಲ್ಲಿ 1.63 ಲಕ್ಷ ಮಂದಿ 14-25ರ ವರ್ಷ ವಯಸ್ಸಿನವರು. 2012ರಿಂದ ವೆಬ್‌ಸೈಟ್ ಮೂಲಕ 12.72 ಲಕ್ಷ ಜನರು ಸಂಘ ಸೇರಲು ಆಸಕ್ತಿ ತೋರಿಸಿದ್ದಾರೆ ಎಂದರು.