ಗುರುವಾರ , ಅಕ್ಟೋಬರ್ 22, 2020
24 °C
ಬಿಜೆಪಿ ಆಗ್ರಹ–ಸತ್ಯಶೋಧನಾ ಸಮಿತಿ ವರದಿ ಬಿಡುಗಡೆ

ಡಿ.ಜೆ.ಹಳ್ಳಿ ಗಲಭೆ ತನಿಖೆ ಎನ್‌ಐಎಗೆ ವಹಿಸಲು ಬಿಜೆಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸಬೇಕು ಮತ್ತು ರಾಜ್ಯದಲ್ಲಿ ಎಸ್‌ಡಿಪಿಐ ಅನ್ನು ನಿಷೇಧಿಸಬೇಕು’ ಎಂದು ಶಾಸಕ ಅರವಿಂದ ಲಿಂಬಾವಳಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ನೀಡಿದೆ.

ಬುಧವಾರ ಈ ವರದಿಯನ್ನು ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ‘ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ವ್ಯವಸ್ಥಿತ ಪಿತೂರಿಯಿಂದಲೇ ಈ ಗಲಭೆ ನಡೆದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ’ ಎಂದು ಹೇಳಿದರು.

‘ಕಾಂಗ್ರೆಸ್‌ಗೆ ಅಧಿಕಾರದ ಹುಚ್ಚು ಈ ಗಲಭೆಯ ಹಿಂದಿರುವುದು ಸ್ಪಷ್ಟವಾಗಿದೆ. ಗಲಭೆ 2 ರಿಂದ 3 ಗಂಟೆ ಕಾಲ ನಡೆದಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಗಲಭೆಗೆ ಮೊದಲೇ ಒಡೆಯಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲು ಮತ್ತು ಗಲಭೆಗೆ ಬೇಕಿರುವ ಮಾರಕಾಸ್ತ್ರಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳಲಾಗಿತ್ತು, ಪೂರ್ವ ನಿಯೋಜಿತ ಎಂಬುದಕ್ಕೆ ಇದು ಸಾಕ್ಷಿ’ ಎಂದು ಕಟೀಲ್‌ ಹೇಳಿದರು.

‘ಬಿಬಿಎಂಪಿ ಸದಸ್ಯರಾದ ಅಬ್ದುಲ್‌ ಹಫೀಜ್ ಜಾಫಿ, ಸಂಪತ್‌ ರಾಜ್, ಇರ್ಷಾದ್‌ ಬೇಗಂ ಅವರ ಪತಿ ಈ ಕೃತ್ಯದಲ್ಲಿ ಕೈಜೋಡಿಸಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್‌ ಪಕ್ಷವು ಆಂತರಿಕ ನಾಯಕತ್ವದ ಸಮಸ್ಯೆ ಪರಿಹರಿಸದೇ ಇರುವುದೇ ಗಲಭೆಗೆ ಕಾರಣ’ ಎಂದೂ ಅವರು ಆರೋಪಿಸಿದರು.

‘ಈ ವರದಿಯನ್ನು ನಾಳೆ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು’ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಸತ್ಯಶೋಧನಾ ಸಮಿತಿಯಲ್ಲಿ ಸಂಸದರಾದ ಪಿ.ಸಿ.ಮೋಹನ್, ನಾರಾಯಣಸ್ವಾಮಿ ಅವರು ಸಮಿತಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು