ಶನಿವಾರ, ಜೂನ್ 19, 2021
28 °C

ನಕಲಿ ಖಾತೆ ತೆರೆದು ಕೋವಿಡ್ ಔಷಧಿ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯರ ಹೆಸರಿನಲ್ಲಿ ‘ಇಂಡಿಯಾ ಮಾರ್ಟ್’ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಕೋವಿಡ್ ಔಷಧಿ ಮಾರಾಟ ಮಾಡಿ ಜನರನ್ನು ವಂಚಿಸಲಾಗುತ್ತಿದ್ದು, ಈ ಸಂಬಂಧ ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ ಪ್ರತಿಷ್ಠಿತ ವೈದ್ಯರ ಹೆಸರು ಬಳಸಿಕೊಂಡು ವಂಚಕರು ಔಷಧಿ ಮಾರುತ್ತಿದ್ದಾರೆ. ಈ ಬಗ್ಗೆ ವೈದ್ಯರೊಬ್ಬರು ಇತ್ತೀಚೆಗೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೋರಮಂಗಲ ನಿವಾಸಿಯಾಗಿರುವ ವೈದ್ಯರೊಬ್ಬರ ಫೋಟೊ ಹಾಗೂ ವಿವರ ಬಳಸಿಕೊಂಡು ಇಂಡಿಯಾ ಮಾರ್ಟ್ ಜಾಲತಾಣದಲ್ಲಿ ನಕಲಿ ಖಾತೆ ತೆರೆಯಲಾಗಿದೆ. ‘ನಾನು ಕೋವಿಡ್ ರೋಗಕ್ಕೆ ಔಷಧಿ ನೀಡುತ್ತೇನೆ. ಬೇಕಾದವರು ಸಂಪರ್ಕಿಸಿ’ ಎಂದು ಜಾಹೀರಾತು ಪ್ರಕಟಿಸಿದ್ದಾರೆ. ಇದನ್ನು ನಂಬಿ ಹಲವರು ಔಷಧಿಯನ್ನು ಖರೀದಿಸಿದ್ದಾರೆ.’

‘ವಿಷಯ ಗೊತ್ತಾಗುತ್ತಿದ್ದಂತೆ ವೈದ್ಯ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಹಲವರು ಆರೋಪಿಗಳ ಬಳಿ ಔಷಧಿ ಖರೀದಿಸಿ ವಂಚನೆಗೀಡಾಗಿದ್ದು ಗೊತ್ತಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.