ಬೆಂಗಳೂರು: ಡೋಹರ, ಸಮಗಾರ, ಮಚಿಗಾರ ಸಮುದಾಯಗಳನ್ನು ಮಾದಿಗರೊಂದಿಗೆ ಸಮೀಕರಣ ಮಾಡುವುದನ್ನು ನಿಲ್ಲಿಸಬೇಕು. ಈ ತ್ರಿಮತಸ್ಥ ಸಮುದಾಯಗಳಿಗೂ ಮತ್ತು ಮಾದಿಗ ಸಮುದಾಯಕ್ಕೂ ಸಂಬಂಧವಿಲ್ಲ ಎಂದು ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್ ತಿಳಿಸಿದೆ.

‘ಮಾದಿಗ, ಸಮಗಾರ, ಚನ್ನಯ್ಯ, ಡೋಹರ, ದಕ್ಕಲಿಗ ಜಾತಿ–ಉಪಜಾತಿ ಸಂಘಟನೆಗಳ ಒಕ್ಕೂಟ–ಕರ್ನಾಟಕ’, ‘ಮಾದಿಗ, ಸಮಗಾರ, ಚನ್ನಯ್ಯ, ಡೋಹರ ಹಾಗೂ ಹೊಲೆಯ ಸಮಾಜಗಳ ಒಕ್ಕೂಟ–ಕರ್ನಾಟಕ ರಾಜ್ಯ’ ಹೆಸರುಗಳಲ್ಲಿ ಪೋಸ್ಟರ್ಗಳನ್ನು ಹಂಚಲಾಗುತ್ತಿದೆ. ಇದು ಸಾಂಸ್ಕೃತಿಕ ಅತಿಕ್ರಮಣವಾಗಿದ್ದು, ತ್ರಿಮತಸ್ಥ ಚರ್ಮಕಾರರ ಭಾವನೆಗೆ ಧಕ್ಕೆ ತಂದಿದೆ’ ಎಂದು ಪರಿಷತ್ನ ಸಂಚಾಲಕರು ತಿಳಿಸಿದ್ದಾರೆ.

‘ಇದು ಶ್ರೇಷ್ಠ–ಕನಿಷ್ಠದ ವ್ಯಸನದ ಪ್ರಶ್ನೆ ಅಲ್ಲ. ತ್ರಿಮತಸ್ಥರ ಅಸ್ತಿತ್ವದ ಮತ್ತು ಅಸ್ಮಿತೆಯ ಪ್ರಶ್ನೆ. ಎರಡು ಪರಕೀಯ ಮತ್ತು ಭಿನ್ನ ಸಮುದಾಯಗಳಾಗಿವೆ. ವಿಧಾನಗಳು, ವಿಧಿ ನಿಷೇಧಗಳು, ಧಾರ್ಮಿಕ ಆಚರಣೆಗಳು, ಸಾಮಾಜಿಕ ಸಂಪ್ರದಾಯಗಳು, ಜೀವನಪದ್ಧತಿ, ಸಂಸ್ಕಾರಗಳು, ದೇವತಾರಾಧನೆ ಕ್ರಮ, ಆಹಾರ ಕ್ರಮಗಳು ಮಾದಿಗ ಸಮುದಾಯದ ಜೀವನ ಶೈಲಿಗಿಂತ ಸಂಪೂರ್ಣ ಭಿನ್ನವಾಗಿದೆ’ ಎಂದು ವಿವರಿಸಿದ್ದಾರೆ.

ಮಾದಿಗ, ಮಾದರ್, ಎಡಗೈ, ಎಡಗುಂಪು ಇದ್ಯಾವುದೂ ಅಲ್ಲದ ಡೋಹರ, ಮಚಿಗಾರ, ಸಮಗಾರರನ್ನು ಯಾವುದೇ ಸೂಚನೆ ನೀಡದೇ ಮಾದಿಗ ಜಾತಿಯವರು ಎಂದು ಬಿಂಬಿಸಲಾಗುತ್ತಿದೆ. ಎಡಗೈ ಗುಂಪು ಎಂದು ಹಣೆಪಟ್ಟಿ ಕಟ್ಟುವ ಪ್ರಯತ್ನಗಳು ಖಂಡನೀಯ. ಅಸ್ಪೃಶ್ಯರಲ್ಲೇ ದುರ್ಬಲ ಸಮುದಾಯ ನಮ್ಮದು. ಮಾದಿಗರ 28 ಸಮುದಾಯಗಳು ಎಂದು ಈ ಮೂರು ಸಮುದಾಯಗಳನ್ನು ಸೇರಿಸಿ ವರ್ಗೀಕರಿಸಿದರೆ ಶಾಶ್ವತ ಅಪಾಯ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.